Wednesday, September 14, 2011

ಗಾದೆ ಮಾತುಗಳು.

Add caption
ವೇದ ಸುಳ್ಳಾದರೂ ಗಾದೆ ಸುಳ್ಳಾಗದು (ಅಕಾರಾದಿಯಾಗಿ ಗಾದೆಗಳು)
ಅಡಿಕೆಗೆ ಹೋದ ಮಾನ, ಆನೆ ಕೊಟ್ಟರು ಬರಲ್ಲ.
ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ.
ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಇಷ್ಟ.
ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ.

ಅತ್ತ ದರಿ ಇತ್ತ ಪುಲಿ.
ಅತಿಸ್ನೇಹ ಮತಿಗೆಡಿಸಿತು.
ಅಧರಕ್ಕೆ ಕಹಿ, ಉದರಕ್ಕೆ ಸಿಹಿ.
ಅನ್ನದೇವರ ಮುಂದೆ ಇನ್ನು ದೇವರು ಉಂಟೇ?
ಅಡಿಗೆ ಬಲ್ಲವನ ಹೆಂಡತಿಯಾಗಬಾರದು, ಕೆಲಸಬಲ್ಲವನ ಆಳಾಗಬಾರದು.
ಅರಮನೆಯಿದ್ದರೂ, ನೆರೆಮನೆ ಬೇಕು.
ಅಲ್ಪರ ಸಂಗ ಅಭಿಮಾನ ಭಂಗ.
ಅಹಂಕಾರಕ್ಕೆ ಉದಾಸೀನವೇ ಮದ್ದು.
ಅಳದಿದ್ದರೆ ಅಮ್ಮನೂ ಹಾಲುಣಿಸಳು.
ಅಂಕೆಯಿಲ್ಲದ ಕಪಿ ಲಂಕೆ ಸುಟ್ಟಿತು.
ಆಕಳು ಕಪ್ಪಾದರೆ ಹಾಲು ಕಪ್ಪೇ!
ಆಕಾಶಕ್ಕೆ ಏಣಿ ಹಾಕಿದ ಹಾಗೆ.
ಆಟಕ್ಕೆ ತಕ್ಕ ವೇಷ, ವೇಷಕ್ಕೆ ತಕ್ಕ ಭಾಷೆ.
ಆರಕ್ಕೇರಲಿಲ್ಲ, ಮೂರಕ್ಕೀಳೀಲಿಲ್ಲ.
ಆರಿದ್ರಾ ಗುಡುಗಾಂಗಿಲ್ಲಾ, ಮೃಗ ಮಿಂಚಾಂಗಿಲ್ಲಾ.
ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.
ಆಲಕ್ಕೆ ಹೂವಿಲ್ಲ, ಸಾಲಕ್ಕೆ ಕೊನೆಯಿಲ್ಲ.
ಆಳಾಗಬಲ್ಲವನು ಅರಸಾಗಬಲ್ಲ.
ಇತ್ತದರಿ, ಅತ್ತ ಪುಲಿ.
ಇಂಗು-ತೆಂಗು ಇದ್ದರೆ, ಮಂಗಮೂಳೆಯೂ ಅಡಿಗೆ ಮಾಡಿಯಾಳು.
ಇಪ್ಪತ್ತಕ್ಕೆ ಯಜಮಾನಿಕೆ, ಎಪ್ಪತ್ತಕ್ಕೆ ಹೇಲಾಟ.
ಇರುಳು ಕಂಡ ಬಾವಿಯಲ್ಲಿ ಹಗಲು ಬಿದ್ದಂತೆ.
ಉಕ್ಕಿದ ಮೇಲೆ ಸಾರಲ್ಲ, ಸೊಕ್ಕಿದ ಮೇಲೆ ಹೆಣ್ಣಲ್ಲ.
ಉಪಾಯ ಬಲ್ಲವನಿಗೆ ಅಪಾಯವಿಲ್ಲ.
ಉಪ್ಪಿಗಿಂತ ರುಚಿ ಇಲ್ಲ, ತಾಯಿಗಿಂತ ಬಂಧು ಇಲ್ಲ.
ಉಪ್ಪು ತಿಂದವ ನೀರು ಕುಡಿಯಲೇ ಬೇಕು!
ಉಪಗ್ರಹ ಕೇಂದ್ರದಲ್ಲಿದ್ದರೂ, ಶನಿಗ್ರಹ ಕಾಟ ತಪ್ಪಲಿಲ್ಲ.
ಊದುವದನ್ನು ಕೊಟ್ಟು ಬಾರಿಸುವದನ್ನು ತಂದಂತೆ.
ಊರಿಗೆ ಬಂದವಳು ನೀರಿಗೆ ಬಾರಳೇ.!
ಊರಿಗೆ ಹಂದಿ ಬೇಕು, ನೆರೆಗೆ ನಿಂದಕ ಬೇಕು.
ಊರಿದ್ದಲ್ಲಿ ಹೊಲಗೇರಿ.
ಊರು ಸುಟ್ಟರೂ ಹನುಮಪ್ಪ ಹೊರಗೆ.
ಊರಿಗೆ ದೊರೆಯಾದರೂ ತಾಯಿಗೆ ಮಗನೇ.
ಊರೆಲ್ಲ ದೋಚಿಕೊಂಡು ಹೋದಮೇಲೆ ದೊಡ್ಡಿ (ಕೋಟೆ) ಬಾಗಿಲು ಹಾಕಿದರಂತೆ.
ಎಂಜಲು ಕೈಯಿಂದ ಕಾಗೆ ಅಟ್ಟನು.
ಎತ್ತು ಏರಿಗೆಳೀತು, ಕೋಣ ನೀರಿಗೆಳೀತು.
ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ ಹಾಕಿದರಂತೆ. !
ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ.
ಎದೆ ಸೀಳಿದರೂ ಎರಡಕ್ಷರವಿಲ್ಲ.
ಎರಡು ದೋಣಿಯ ಮೇಲೆ ಕಾಲಿಟ್ಟ ಹಾಗೆ.
ಎಲ್ಲರ ಮನೆಯ ದೋಸೆಗೂ ತೂತೆ!
ಎಲ್ಲಿ ಹೋದರೂ ಮುತ್ತುಗಕ್ಕೆ ಮೂರೇ ಎಲೆ.
ಎಲ್ಲಮ್ಮನ ಗುಡ್ಡದಾಗೆ ಮುಲ್ಲಾಂಗೇನು ಕೆಲಸ?
ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ.
ಒಲಿದರೆ ನಾರಿ, ಮುನಿದರೆ ಮಾರಿ.
ಓತೀಕಾಟಕ್ಕೆ ಬೇಲೀ ಗೂಟ ಸಾಕ್ಷಿ.
ಓದಿ ಓದಿ ಮರುಳಾದ ಕೂಚು ಭಟ್ಟ.
ಓದು ಒಕ್ಕಾಲು ಬುದ್ಧಿ ಮುಕ್ಕಾಲು.
ಕಳ್ಳ ಮಂತ್ರಿಗೆ ಸುಳ್ಳ ಅಧಿಕಾರಿ ಕಾರ್ಯದರ್ಶಿಯಂತೆ .
ಕಂಟ್ರಿ ಕ್ಲಬ್ಬಿಗೆ ಹೋಗಿ ಕಂಟ್ರಿ ಸಾರಾಯಿ ಕೇಳಿದಂಗಾಯ್ತು.
ಕಂಡಿದ್ದನ್ನಾಡಿದರೆ, ಕೆಂಡದಂಥ ಕೋಪ.
ಕಂಡರೆಮಾಣಿ, ಉಂಡರೆ ಗೋಣಿ.
ಕಣ್ಣೆರಡಾದರೂ, ದೃಷ್ಟಿ ಒಂದೇ!
ಕತ್ತೆ ಬಲ್ಲುದೇ ಕತ್ತುರಿಯ ಪರಿಮಳವ?
ಕದ್ದರೊಟ್ಟಿ ಬೇರೆ, ದೇವರಪ್ರಸಾದ ಬೇರೆ.
ಕಸ ತಿನ್ನುವದಕ್ಕಿಂತ ತುಸು ತಿನ್ನುವುದು ಲೇಸು.
ಕಬ್ಬುಡೊಂಕಾದರೆ ಅದರ ಸಿಹಿ ಡೊಂಕೇ?
ಕುಂಬಳಕಾಯಿ ಕಳ್ಳ! ಎಂದರೆ, ಹೆಗಲು ಮುಟ್ಟಿಕೊಂಡನಂತೆ!
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ..
ಕುರುಡು ಕಣ್ಣಿಗೆ ಕಾಡಿಗೆ ಇಟ್ಟಂತೆ!
ಕೆಡುವ ಕಾಲಕ್ಕೆ ಬುದ್ಧಿ ಇಲ್ಲ, ಮರಣ  ಕಾಲಕ್ಕೆ ಮದ್ದಿಲ್ಲ!
ಕೆಳಸೇತುವೆ ಕಟ್ಟಿಸಿ ಮೇಲ್ಸೇತುವೆ ಬಿಲ್ ತಿಂದ .
ಕೇಳಿದ್ದೆಲ್ಲ ನಂಬಬಾರದು, ತಿಳಿದಿದ್ದೆಲ್ಲ ಹೇಳಬಾರದು.
ಕೈ ಕೆಸರಾದರೆ, ಬಾಯಿ ಮೊಸರು.
ಕೈಯಲ್ಲಿ ಉರಿಯೋ ಸಿಗರೇಟ್ ಹಿಡ್ಕೊಂಡು ಬೆಂಕಿಕಡ್ಡಿಗೆ ಊರೆಲ್ಲ ಅಲೆದಾಡಿದರಂತೆ
ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ.
ಖರ್ಗೆ ನಗೋಲ್ಲ ಧರ್ಮಸಿಂಗ್ ಓಡೊಲ್ಲ.
ಗಂಡನಿಗೆ ಗಂಟು ತೋರಿಸಬೇಡ, ಮಗುವಿಗೆ ಸಿಹಿ ತೋರಿಸಬೇಡ.
ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ.
ಗಂಡನಿಗೆ ನಿಕ್ಕರ್ ಇಲ್ಲದಿದ್ರು ಹೆಂಡತಿಗೆ ಕುಕ್ಕರ್ ಬೇಕು.
ಗಂಡಸರ ಕೈಯ್ಯಲ್ಲಿ ಕೂಸು ನಿಲ್ಲದು, ಹೆಂಗಸರ ಬಾಯಲ್ಲಿ ಮಾತು ನಿಲ್ಲದು.
ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ?
ಗುಡಿಸಿದ ಮೇಲೆ ಕಸವಿರಬಾರದು, ಬಡಿಸಿದ ಮೇಲೆ ಹಸಿವಿರ ಬಾರದು.
ಗೆದ್ದವನು ಸೋತ, ಸೋತವನು ಸತ್ತ.
ಚನ್ನಮ್ಮನ ಕೆರೆ ಒಣಗಿಸಿ, ಅಚ್ಚುಕಟ್ಟಾಗಿ ಮನೆ ಕಟ್ಟಿಸಿದಂಗಾಯ್ತು.
ಚರ್ಮ ತೊಳೆದರೆ ಕರ್ಮ ಹೋದೀತೇ?
ಚಿಂತೆ ಇಲ್ಲದವನಿಗೆ ಸನ್ತೇಲು ನಿದ್ದೆ.
ಛತ್ರದಲ್ಲಿ ಭೋಜನ ಮಠದಲ್ಲಿ ನಿದ್ರೆ.
ಜರೆದು ಕೊಳ್ಳ ಬೇಕು, ಹೊಗಳಿ ಮಾರ ಬೇಕು.
ಜಲ ಶೋಧಿಸಿ ನೀರು ತರ್ಬೇಕು, ಕುಲ ಶೋಧಿಸಿ ಹೆಣ್ಣು ತರ್ಬೇಕು.
ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.
ಜೈಲು ಹೋಗು ಅಂತಿದೆ, ರಾಜಕಾರಣ ಬಾ ಅಂತಿದೆ.
ತನುವರಿಯದ ನೋವಿಲ್ಲ, ಮನವರಿಯದ ಪಾಪವಿಲ್ಲ.
ತನ್ನೂರಲ್ಲಿ ರಂಗ, ಪರೂರಲ್ಲಿ ಮಂಗ.
ತಣ್ಣೀರಾದ್ರು ತಣಿಸಿ ಕುಡಿಯಬೇಕು.
ತಾನಾಗಿ ಮಾಡ, ಮಾಡಿದ್ದು ನೋಡ.
ತಾಳಿದವ ಬಾಳಿಯಾನು.
ತೀರ್ಥ ಕುಡಿದರೆ ಥಂಡಿ, ಪ್ರಸಾದ ತಿಂದರೆ ಗಿಂಡಿ!
ತುಂಬಿದ ಕೊಡ ತುಳುಕುವುದಿಲ್ಲ.
ದಂಡಿನಲ್ಲಿ ಕೆಟ್ಟದ್ದು ಹಾದರವಲ್ಲ, ಬರದಲ್ಲಿ ಕದ್ದದ್ದು ಕಳವಲ್ಲ!
ದುಡ್ಕೊಂಡು ತಿನ್ನೋ ಅಂದ್ರೆ, ರಾಜಕಾರಣ ಸೇರತೀನಿ ಅಂದನಂತೆ.
ದೂರದ ಬೆಟ್ಟ, ಕಣ್ಣಿಗೆ ನುಣ್ಣಗೆ.
ದೇವರು ವರ ಕೊಟ್ಟರು ಪೂಜಾರಿ ಕೊಡಬೇಕಲ್ಲ.
ದೇಶ ಸುತ್ತು ಕೋಶ ಓದು.
ನರಕಕ್ಕೆ ನವದ್ವಾರ, ನಾಶಕ್ಕೆ ಒಂದೇ ದ್ವಾರ!
ನಂದಿನಿಯವರ ನೆಂಟಸ್ತನ, ಹಾಲಿಗೆ ಬಡತನ.
ನಾಯೀನ ಕರೆದುಕೊಂಡು ಹೋಗಿ, ಸಿಂಹಾಸಾನದ ಮೇಲೆ ಕೂರಿಸಿದ ಹಾಗಯ್ತು.!
ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತಾ?
ನೆಟ್ ನಲ್ಲಿ ಸಿಗದಿದದ್ದು ಅಟ್ಟದಲ್ಲಿ ಸಿಗುತ್ತಾ?
ನೆಂಟ ನೆರವಲ್ಲ, ಕುಂಟ ಜೊತೆಯಲ್ಲ.
ಪಕ್ಷ ಪಾಂಡವರಲ್ಲಿ, ಊಟ ಕೌರವರಲ್ಲಿ.
ಪ್ರತ್ಯಕ್ಷ ಕಂಡರೂ, ಪ್ರಮಾಣಿಸಿ ನೋಡು.
ಬಂದ ದಾರಿಗೆ ಸುಂಕವಿಲ್ಲ.
ಬಡವನ  ಸಿಟ್ಟು ದವಡೆಗೆ ಮೂಲ.
ಬರಬರುತ್ತಾ ರಾಯರ ಕುದುರೆ ಕತ್ತೆಯಾಯಿತು!
ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚು.
ಬೀದಿಯ ಕೂಸು ಬೆಳೆಯಿತು, ಕೋಣೆಯ ಕೂಸು ಕೊಳೆಯಿತು.
ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗಲ್ವಾ?
ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ.
ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಚಿನ್ನ ಅಲ್ಲ.
ಬೇಕೆಂಬುದು ಬದುಕು, ಸಾಕೆಂಬುದು ಸಾವು.
ಭಂಡ ಮಾವನಿಗೆ ಮೊಂಡು ಅಳಿಯ.
ಮಂಗ ಮೊಸರು ತಿಂದು ಮೇಕೆ ಬಾಯಿಗೆ ಸವರಿದ ಹಾಗಾಯಿತು.
ಮಂತ್ರಕ್ಕಿಂತ ಉಗುಳು ಜಾಸ್ತಿ.
ಮಣಮಾತಿಗಿಂತ ಕಣಕೃತಿ ಲೇಸು.
ಮನಸಿದ್ದರೆ ಮಾರ್ಗ.
ಮಲ್ಲಿಗೆ ಜೊತೆ ನಾರೂ ಸ್ವರ್ಗ ಸೇರಿತು.
ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು.
ಮನೆಗೆ ಮಾರಿ, ಊರಿಗೆ ಉಪಕಾರಿ.
ಮನೆಗೊಂದು ಮುದಿಗುಂಟಿ, ಒಲೆಗೊಂದು ಅಡಿಗುಂಟಿ.
ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು.
ಮಾತು ಬೆಳ್ಳಿ, ಮೌನ ಬಂಗಾರ.
ಮಾತು ಮನೆ ಮುರಿಯಿತು, ತೂತು ಓಲೆ ಕೆಡಿಸಿತು.
ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ.
ಮೊಬೈಲ್ ಕಳ್ಳನನ್ನು ಮಹಾದೇವನೂ ಹಿಡಿಯಲಾರ.!
ರವಿ ಕಾಣದ್ದನ್ನು ಕವಿ ಕಂಡ!
ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡಲಿಲ್ಲ!
ಲಂಕೆಯಲ್ಲಿ ಹುಟ್ಟಿದವರೆಲ್ಲ ರಾವಣರೇ!?
ವಿದ್ಯೆ ಇಲ್ಲದವ ಹದ್ದಿಗಿಂತ ಕಡೆ.
ವೇದ ಸುಳ್ಳಾದರೂ, ಗಾದೆ ಸುಳ್ಳಾಗದು.
ಶಂಖದಲ್ಲಿ ಬಂದರೆ ಮಾತ್ರ ತೀರ್ಥ.
ಶರಣರ  ಸಾವು ಮರಣದಲಿ ನೋಡು.
ಶ್ರೀರಾಮಪುರದಲ್ಲಿ ಇರೋರೆಲ್ಲ ಏಕ ಪತ್ನಿವ್ರತಸ್ಥರಲ್ಲ.
ಸಮ್ಮಿಶ್ರ ಸರ್ಕಾರಕ್ಕೆ ವರ್ಷ, ಎಲ್ಲರಿಗೂ ಕೊಳ್ಳೆ ಹೊಡೆದಿದ್ದೆ ಹರ್ಷ .
ಸದಾಶಿವನಿಗೆ ಅದೇ ಧ್ಯಾನ.
ಸಮಯಕ್ಕೆ ಬಾರದ ಬುದ್ಧಿ ಸಾವಿರ ಇದ್ದರೂ ಲದ್ದಿ.
ಸಿಜೇರಿಯನ್ ಆದವಳಿಗೇನು ಗೊತ್ತು ಹೆತ್ತವಳ ಕಷ್ಟ.
ಸೌಟು ಬಲ್ಲುದೇ ಸಾರಿನ ರುಚಿಯ!?
ಹತ್ತು ಕಟ್ಟೋ ಕಡೆ ಒಂದು ಮುತ್ತು ಕಟ್ಟು.
ಹನುಮಂತಾನೆ ಬಾಲ ಕಡಿತಿರುವಾಗ, ಇವನ್ಯಾವನೋ ಶಾವಿಗೆ ಕೇಳಿದನಂತೆ.
ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಸೇರಿದರೆ ಬಳ್ಳ.
ಹಣ ಅಂದ್ರೆ ಹೆಣಾನೂ ಬಾಯಿ ಬಿಡುತ್ತೆ!
ಹತ್ತೂರಲ್ಲಿ ವಾಸಿಯಾಗದ ಕಾಯಿಲೆ ಜಕ್ಕೂರಲ್ಲಿ ವಾಸಿಯಾಗುತ್ತಾ!?
ಹುಚ್ಚರ ಮದುವೆಯಲ್ಲಿ ಉನ್ಡೋನೇ ಜಾಣ.
ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು.
ಹೆತ್ತವರಿಗೆ ಹೆಗ್ಗಣ ಮುದ್ದು.
ಹೆಂಡ್ತಿ ಮೇಲೆ ಆಸೆ, ಪಕ್ಕದ ಮನೆಯವಳ ಮೇಲೆ ಪ್ರೀತಿ.
ಹೊಡೆದರೆ ಟೈಸನಗೆ ಹೊಡಿಬೇಕು, ಮದುವೆಯಾದರೆ ಐಶ್ವರ್ಯ ರೈಯನ್ನೇ ಮದುವೆಯಾಗಬೇಕು!
ಲಂಚದಲ್ಲಿ ಬಂದಿದ್ದು ಮಂಚದಲ್ಲಿ ಹೋಯಿತು.
ಲೋಕಾಯುಕ್ತ ದಾಳಿನೂ ಆಗಬೇಕು, ಜೊತೆಗೆ ಭಡ್ತಿನೂ ಸಿಗಬೇಕು.


ನಿಮಗೆ ಗೊತ್ತಿದ್ದ ಗಾದೇನೂ ಸೇರಿಸಿ……….(ಪ.ಪು.)


No comments:

Post a Comment