Friday, October 02, 2026

ಮಾತು ಮತ್ತು ಮಂತ್ರಗಳು

ನಾವಾಡುವ ಮಾತಿಗೆ ಬೆನ್ನುಂಟು. ಅದನ್ನು ನಮ್ಮ ಪೂರ್ವಜರು ಅರ್ಥ ಮಾಡಿ ಕೊಂಡಿದ್ದರು. ಮಾತು ಬಾಯಿಯಿಂದ ಹೊರ ಬಂದಾಗ ಅದು ತನ್ನ ನಾಲ್ಕನೇ ಅವಸ್ಥೆಯಲ್ಲಿರುತ್ತದೆ. ಎಂದು ವೇದ ಮಂತ್ರವೊಂದು ಸಾರಿ ಹೇಳಿದೆ. ತು॒ರೀಯಂ॑ ವಾ॒ಚೋ ಮ॑ನು॒ಷ್ಯಾ॑ ವದಂತಿ. ಹಿಂದಿನ ಮೂರು ಅವಸ್ಥೆಗಳನ್ನೂ ಋಷಿಗಳು ತೆರೆದಿಟ್ಟಿದ್ದಾರೆ. ಪರಾ, ಪಶ್ಯಂತೀ, ಮಧ್ಯಮಾ ಮತ್ತು ವೈಖರೀ. ನಾವಾಡುವ ಮಾತು ವೈಖರೀ ಎಂದಾದರೆ ಇದರ ಹಿಂದಿನ ಮಾತುಗಳು ಅಥವಾ ಬೆನ್ನಿನ ನುಡಿಗಳು ಯಾವು ಯಾವುದಾಗಿರುವವು? ಎಂಬುದನ್ನು ನೋಡೋಣ.

ಶಬ್ದಗಳನ್ನು ಗಮನಿಸಿದರೆ ಕೆಲವು ಗುಣಾಂಕದ ಶಬ್ದಗಳನ್ನು ಮಾತ್ರ ನಮ್ಮ ಕಿವಿಯೆಂಬ ಶ್ರೋತ್ರೇಂದ್ರಿಯ ಗ್ರಹಿಸುತ್ತದೆ. ಉದಾಹರಣೆಗೆ ೧೦೦೦ ದಿಂದ ೧೧೦೦ ಗುಣಾಂಕಗಳನ್ನು ಈ ಕರ್ಣ ಗ್ರಹಿಸುತ್ತದೆ ಎಂದಿಟ್ಟು ಕೊಂಡರೆ, ಅದಕ್ಕಿಂತ ಕಡಿಮೆ ಗುಣಾಂಕದವು(೯೦೦) ಮತ್ತು ಹೆಚ್ಚಿನವು(೧೨೦೦) ನಮ್ಮ ಗ್ರಹಿಕೆಗೆ ನಿಲುಕದವು. ಹೀಗೆ ನಿಲುಕದ ಎರಡು ಶಬ್ದಗಳು ಮತ್ತು ನಮಗೆ ತಿಳಿಯದ (ಅರ್ಥವಾಗದ) ಮಾತುಗಳು (ಶಬ್ದಗಳ ರಾಶಿ). ಇವಗಳನ್ನೇ ಒಟ್ಟಾಗಿ ಪರಾ, ಪಶ್ಯಂತೀ ಮತ್ತು ಮಧ್ಯಮಾ ಎಂದು ಪೂರ್ವಜರು ಹೇಳಿದ್ದಾರೆಯೇ?


ಆತ್ಮಾ ಬುದ್ಧ್ಯಾ ಸಮೇತ್ಯಾರ್ಥಾನ್ಮನೋಯುಂಕ್ತೇ ವಿವಕ್ಷಯಾ । ಮನಃ ಕಾಯಾಗ್ನಿಮಾಹಂತಿ ಸ ಪ್ರೇರಯತಿ ಮಾರುತಮ್ ॥ಮಾರುಸ್ತೂರಸಿಚರನ್ಮಂದ್ರಂ ಜನಯತಿ ಸ್ವರಮ್ । ಈ ತೆರನಾಗಿ ಮಾತಿನ ಹುಟ್ಟನ್ನು ಪಾಣಿನಿ ಮಹರ್ಷಿಗಳು ತಮ್ಮ ಶೀಕ್ಷಾ ಗ್ರಂಥವೊಂದರಲ್ಲಿ ನಿರೂಪಿಸಿದ್ದಾರೆ. ಸ್ವರದ ಆವಿರ್ಭಾವವನ್ನು ಹೇಳುತ್ತಾ , ಅದರ ಹಿಂದಿನ ಪ್ರಕ್ರಿಯೆಗಳನ್ನು ಇಲ್ಲಿ ತೆರೆದಿಡಲಾಗಿದೆ. 

  1.  ತಾನು ತನ್ನ ಬುದ್ಧಿಗೆ ಹೇಳಿದ ಮಾತು.

        2.  ಬುದ್ಧಿ ಮನಸ್ಸಿಗೆ ಹಂಚಿದ ಮಾತು.

        3.  ಮನಸ್ಸು ಶರೀರಾಗ್ನಿಯನ್ನು ತಿವಿದು ಹೇಳಿದ ಮಾತು.

        4.  ಅಗ್ನಿಯಿಂದ ಪ್ರೇರಿತನಾದ ವಾಯುವು ಹೃದಯವನ್ನು ಹೊಕ್ಕು ಬಾಯಿಂದ ಹೊರಬಿದ್ದಾಗ ಬಂದ ಮಾತು.  

ಈ ನಾಲ್ಕನೆಯ ಮಾತು ’ವೈಖರೀ’ ಎಂದಾದರೆ, ಅದರ ಹಿಂದಿನ ಮೂರು ಮಾತುಗಳು ”ಪರಾಪಶ್ಯಂತೀಮಧ್ಯಮ”ರಾಗಿದ್ದಾರೆ ಎಂದು ಒಪ್ಪಬಹುದು... ಹೀಗೆ ಮಾತಿಗೆ ಬೆನ್ನಿದೆ. ಅದೇ ತಿಳಿಯದ ಮಾತು. ಅದನ್ನು ತಿಳಿಸಿಕೊಡಲು ಋಷಿಗಳು ತುಂಬಾ ಹೆಣಗಿದ್ದಾರೆ. ಎಂಬಲ್ಲಿಗೆ ನಶ್ಯವಾದ ಮಾತಿನ ಪ್ರಪಂಚವೇ ಇಷ್ಟು ಅಗಾಧವಾಗಿ ಕಂಡಿರುವಾಗ ಅವಿನಶ್ಯವಾದ ಮಂತ್ರಗಳನ್ನು ಋಷಿಗಳು ಹೇಗೆ ಕಂಡರಿತಿರುವರು? ಎಂಬುದನ್ನು ನೋಡೋಣ! ಇದು ನಶ್ಯದಿಂದವಿನಶ್ಯದೆಡೆಗಿನ ಪ್ರಯಾಣವಾಗಿದೆ.

ದೃಶ್ಯವೆಲ್ಲವು ನಶ್ಯವಾದೊಡೇಂ? ದೃಷ್ಟಿಗದು ।

ವಶ್ಯವಿರುವನಕದನು ದೃಷ್ಟಿಪುದೆ ಕಾರ್ಯಂ ॥

ವಿಶ್ವಾನುಭವವೆ ವಿಶ್ವಾತ್ಮಾನುಭವಕೆ ಪಥ ।

ನಶ್ಯದಿಂದವಿನಶ್ಯ - ಮಂಕುತಿಮ್ಮ ॥

ಮನುಷ್ಯರಾಡುವ ಈ ವೈಖರಿಯಲ್ಲಿ ಧ್ವನಿ, ವರ್ಣ, ಪದ  ಮತ್ತು ವಾಕ್ಯಗಳೆಂಬ ನಾಲ್ಕು ವಿಭಾಗಗಳಿವೆ. ಇವಗಳನ್ನೇ ಆಶ್ರಯಿಸಿ, ನಾವು ನಮ್ಮ ಹೊರ ವ್ಯವಹಾರಗಳನ್ನು ನಿರ್ವಹಿಸುತ್ತೇವೆ. ಮತ್ತೊಂದು ಆಶ್ಚರ್ಯಕರ ಸಂಗತಿಯೆಂದರೆ ಇವೇ ನಮ್ಮ ಒಳ ಹೊಳಪುಗಳನ್ನು ಕಂಡುಕೊಳ್ಳಲೂ ಮಾರ್ಗವಾಗಿವೆ. ಮನೆಯ ವಾಸ್ತು ದ್ವಾರದಂತೆ ಒಳಗೆ ಬರಲಿಕ್ಕೆ ಮತ್ತು ಹೊರಗೆ ಹೋಗಲಿಕ್ಕೆ ಇವೆರಡಕ್ಕೂ ಕಾರಣವಾಗಿರುವುದು ಈ ವೈಖರೀ.

 

ಮಂತ್ರಗಳೆಂದರೇನು? ಅವುಗಳ ಹಿನ್ನೆಲೆಗಳಾವುವು? ಎಂಬುದನ್ನು ನೋಡೋಣ.

ಮನ್ತ್ರ್ಯತೇ ಗುಪ್ತಂ ಪರಿಭಾಷ್ಯತೇ ಇತಿ ಮಂತ್ರಃ

“ರಹಸ್ಯವನ್ನು ಹೊತ್ತಿರುವ ಮತ್ತು ಹಂಚುವ ಶಬ್ದಸಾಧನವೇ ಮಂತ್ರ”

ಮತ್ರಿ ಗುಪ್ತಭಾಷಣೇ ಎಂಬುದು ಮಂತ್ರ ಶಬ್ದದ ಧಾತ್ವರ್ಥವಾಗಿದೆ. ಋಗ್ವೇದದಲ್ಲಿ ಮಂತ್ರಗಳನ್ನು

ನಿಣ್ಯಾ ವಚಾಂಸಿ ಗೂಢಾರ್ಥಗಳನ್ನು ಹೊತ್ತ ಮಾತುಗಳೆಂದು ಪ್ರತಿಪಾದಿಸಿದ್ದಾರೆ. ಅಲ್ಲದೇ ದೇವರಾಡಿದ ಮಾತು, ದೇವರಿಗೊಪ್ಪಿತವಾದ ಮಾತು, ದೇವಕಾರ್ಯಗಳ ಸ್ಮರಣಿಕೆಯ ಮಾತು, ಶ್ರೇಷ್ಠವಾದ ಮಾತು ಎಂದು ಬಹುವಾಗಿ ಮಂತ್ರಗಳ ಕುರಿತಾಗಿ ವಿವೇಚಿಸಲಾಗಿದೆ.

ಶಬ್ದಾನಾಂ ಪ್ರವರೋ ಮಂತ್ರಃ ಎಂದು ಮಹಾಭಾರತದ ಶಾಂತಿಪರ್ವದಲ್ಲಿ ಹೇಳಿರುತ್ತಾರೆ.

ನಾದತನುವೇ ಮಂತ್ರ ಎಂದು ಗುರು ಶ್ರೀರಂಗರು ಕೊಂಡಾಡಿದ್ದಾರೆ. ಈ ನಾದ ತನುವನ್ನೇ ಮೀಮಾಂಸಕರು ದೇವರೆಂದು ಪ್ರತಿಪಾದಿಸಿ,ಮಂತ್ರಗಳೇ ಅಕ್ಷರರೂಪವಾದ ಮೂರ್ತಗೊಂಡ ದೇವತೆಗಳು ಎಂದು ಎತ್ತಿಹಿಡಿದಿದ್ದಾರೆ.

ಮನನಾತ್ತ್ರಾಯತೇ ಇತಿ ಮಂತ್ರಃ ಎಂಬ ಪ್ರಸಿದ್ಧವಾದ ನಿರ್ವಚನವೂ ಇದೆ. ಮಂತ್ರಗಳನ್ನು ಪಠಿಸುವುದರಿಂದ ಅವು ನಮ್ಮನ್ನು ರಕ್ಷಿಸುತ್ತವೆ. ಎಂಬ ಅರ್ಥದ ಜೊತೆಗೆ ಮನನಾತ್ – ಮನಃ ಮನಸಸ್ತ್ರಾಯತೇ ಇತಿ ಮಂತ್ರಃ ಎಂದೂ ಹಿರಿಯರು ವಿಶೇಷಾರ್ಥವನ್ನು ಗುರುತಿಸಿದ್ದಾರೆ. ಮನಸ್ಸಿನಿಂದ (ಚಂಚಲತೆಯಿಂದ) ಪಾರುಮಾಡುವ ಶ್ರೇಷ್ಠವಾದ ಮಾತುಗಳೇ ಮಂತ್ರಗಳು.

 ಮಾತಿನ ಹಿಂದೆ ಮೂರು ಕಾಣದ ಅಂಶಗಳಿದ್ದಂತೆ ಮಂತ್ರಗಳಿಗೂ ಹಿಂದೆ ಸೃಜನಾತ್ಮಕ ನಾಲ್ಕು ಅಂಶಗಳಿವೆ. ಈ ನಾಲ್ಕೂ ಅಂಶಗಳಿಂದ ತುಂಬಿದ ಮಾತು ಮಂತ್ರವಾಗುತ್ತದೆ.

       1.  ಜ್ಯೋತಿ (ಮೂಲಜ್ಯೋತಿ-ತಾರಕಜ್ಯೋತಿ-ಅವ್ಯಯಜ್ಯೋತಿ)

       2.   ನಾದ (ಪಾದನಾದ-ಅರ್ಧನಾದ-ತ್ರಿಪಾದನಾದ-ಪೂರ್ಣನಾದ/ಪ್ರಣವ)     

       3. ಬಿಂದು (ಮೂಲಬಿಂದು-ಅರ್ಧಚಂದ್ರಬಿಂದು-ರೋದಿನೀಬಿಂದು-ನಾದಬಿಂದು-ನಾದಾಂತಬಿಂದು-ಶಕ್ತಿವ್ಯಾಪಿಕಾಬಿಂದು-ಸಮನಾಬಿಂದು-ಉನ್ಮನಾಬಿಂದು ಮತ್ತು ಮಹಾಬಿಂದು)

       4.  ಕಲಾ (ಶ್ರುತಿ ಕಲಾ-ಸ್ವರ ಕಲಾ-ಗ್ರಾಮ ಕಲಾ-ಜಾತಿ ಕಲಾ-ರಾಗ ಕಲಾ)

ಇಲ್ಲಿ ಮೂರು ಜ್ಯೋತಿಗಳು, ನಾಲ್ಕು ನಾದಗಳು, ಒಂಭತ್ತು ಬಿಂದುಗಳು ಮತ್ತು ಐದು ಕಲೆಗಳು ವರ್ಣಿತವಾಗಿವೆ. ಇವು ಸನಾತನ ಸಂಸ್ಕೃತಿಯಲ್ಲಿ ಹೇಳಿದ ಜಗತ್ತಿನ ಹುಟ್ಟನ್ನು ಪ್ರತಿಪಾದಿಸುವ ಅಂಶಗಳೂ ಹೌದು. ಆಧುನಿಕ ವಿಜ್ಞಾನದಲ್ಲಿ ಜಗತ್ತಿನ ಹುಟ್ಟು ಎಲೆಕ್ಟ್ರಾನ್ ಗಳಿಂದ (ವಿದ್ಯುತ್ ನಿಂದ ಜಗತ್) ಆರಂಭವಾಗಿದೆಯೆಂದು ಪ್ರತಿಪಾದಿಸಿರುತ್ತಾರೆ. ಅದನ್ನೇ ನಮ್ಮ ಸನಾತನ ಸಂಸ್ಕೃತಿಯ ಋಷಿಗಳು ಜ್ಯೋತಿಯಿಂದ ನಾದವೂ; ನಾದದಿಂದ ಜಗತ್ತಿನ ಸಂಪೂರ್ಣಸೃಷ್ಟಿಯುಂಟಾಗಿದೆಯೆಂದು ಕಂಡು ಕೊಂಡಿದ್ದಾರೆ. ಹೀಗೆ ನಾದ ಪ್ರಪಂಚದಲ್ಲಿ ವಿಶಿಷ್ಟ ವಿಚಾರಗಳನ್ನು ನಿರೂಪಿಸಿ, ಪ್ರಯೋಗಿಸಿದ ಮಹನೀಯರಾದ ನಮ್ಮ ಪೂರ್ವಜರು ಉಳಿದ ಜಗತ್ತು ಕಾಣದ ನಾದಮಯವಾದ ಒಂದು ಹೊಸ ಜಗತ್ತನ್ನು ಆವಿಷ್ಕರಿಸಿರುತ್ತಾರೆ. ಅದೂ ಉಳಿದ ಜಗತ್ತು ಶಿಲಾಯುಗದ ಪಶುತುಲ್ಯ ಮಾನವರಂತೆ ಅಂಡಲೆಯುತ್ತಿರುವಾಗ! ಎಂದರೆ ಅತಿಶಯೋಕ್ತಿಯಾಗದು...


ಹೀಗೆ ನಾದ ಶರೀರವನ್ನು ಹೊತ್ತ ಮಂತ್ರಗಳು ಚೈತನ್ಯದ ಜೊತೆ ಸೇರಿದಾಗ ಉಂಟಾಗುವ ಶಕ್ತಿಯೇ ಅನಂತವೂ, ಅತುಳಬಲಪ್ರದವೂ ಆದ ಮಂತ್ರಶಕ್ತಿ. ಅದಕ್ಕೆಂದೇ ಸಾಯಣಾಚಾರ್ಯರು ಮಂತ್ರಲಕ್ಷಣವನ್ನು ಹೇಳುವಾಗ ಕೊನೆಯಲ್ಲಿ ತಸ್ಮಾದಭಿಯುಕ್ತಾನಾಂ ಮಂತ್ರೋಯಮಿತಿ ಸಮಾಖ್ಯಾನಂ ಲಕ್ಷಣಮ್ | ಎಂದು ಪ್ರತಿಪಾದಿಸಿದ್ದಾರೆ. ಒಟ್ಟರ್ಥದಲ್ಲಿ ಮಂತ್ರಗಳು ಜೀವದ ಸಂಪರ್ಕಕ್ಕೆ ಬಂದಾಗ (ಅಂದರೆ ಒಬ್ಬ ವ್ಯಕ್ತಿ ಅಥವಾ ಒಂದು ಸಮೂಹ ಮಂತ್ರವನ್ನು ತನ್ಮಯತೆಯಿಂದ ಪಠಿಸಿದಾಗ) ಅಲ್ಲಿ ಕಲಾತ್ಮಕತೆ, ಏಕಾಗ್ರತೆ ಮತ್ತು ನಾದಗಳ ಸಮ್ಮೇಳನವುಂಟಾಗಿ ಅದು ಜ್ಯೋತೀರೂಪವಾಗಿರುವ ಶಕ್ತಿಯಾಗಿ ಪರಿಣಮಿಸುತ್ತದೆ. ಹೀಗೆ ಸೃಷ್ಟಿತತ್ವವನ್ನೇ ಎತ್ತಿ ಹಿಡಿದ ಮಂತ್ರಗಳು ಮಾನವನ ಸೃಜನಶೀಲತೆಗೆ ಹಿಡಿದ ಕನ್ನಡಿಯಂತಿವೆ. ಅದಕ್ಕೆ ಋಷಿಗಳಿಗೆ ನಾವು ಸದಾ ಕೃತಜ್ಞರಾಗಿದ್ದೇವೆ ಮತ್ತು ಇಂದಿಗೂ ಮಂತ್ರವಿದರನ್ನು ಗೌರವಿಸುತ್ತಿದ್ದೇವೆ. ಮಹಾಭಾರತದಲ್ಲಿ ಮಂತ್ರ ಬಲ್ಲವರಿಗೆ ಅತಿ ಹೆಚ್ಚು ಮರ್ಯಾದೆ ಸಲ್ಲುತ್ತಿತ್ತೆಂಬ ಅಂಶದ ಪಾಲನೆ ಇಂದಿನವರೆಗೂ ಕಂಡುಬರುತ್ತಿರುವುದು ಸನಾತನ ಹಿಂದೂ ಧರ್ಮದ ಹಿರಿಮೆಯಾಗಿದೆ.

ಬಲಜ್ಜ್ಯೇಷ್ಠಂ ಸ್ಮೃತಂ ಕ್ಷತ್ರಂ ಮಂತ್ರಜ್ಯೇಷ್ಠಾ ದ್ವಿಜಾತಯಃ |

ಧನಜ್ಯೇಷ್ಠಾಃ ಸ್ಮೃತಾ ವೈಶ್ಯಾಃ ಶುದ್ರಾಸ್ತು ವಯಸಾಧಿಕಾಃ || ಉದ್ಯೋಗಪರ್ವ ||

ಪರಮೇಶ್ವರ ಪುಟ್ಟನ್ಮನೆ

Wednesday, August 26, 2026

ಅಥ ಬ್ರಹ್ಮಯಜ್ಞಃ

ಮಮ ಉಪಾತ್ತ ದುರಿತ ಕ್ಷಯ ದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಬ್ರಹ್ಮಯಜ್ಞೇನ ಯಕ್ಷ್ಯೇ ||

ಓಂ ವಿದ್ಯುದಸಿ ವಿದ್ಯಮೇ ಪಾಪ್ಮಾನಮೃತಾತ್ಸತ್ಯಮುಪೈಮಿ | ಇತ್ಯಪಃ ಸ್ಪೃಷ್ಟ್ವಾ, ತ್ರಿರಪಃ ಪೀತ್ವಾ, ದ್ವಿರೋಷ್ಠೌ ಪರಿಮೃಜ್ಯ, ಸವ್ಯಂ ಪಾಣಿಂ ಪಾದೌ ಚ ಪ್ರೋಕ್ಷ್ಯ, ಶಿರಶ್ಚಕ್ಷುಷೀ ನಾಸಿಕೇ ಶ್ರೋತ್ರೇ ಹೃದಯಮಾಲಭ್ಯ ಸಜಲಂ ಸ್ಪೃಷ್ಟ್ವಾ, ಸವ್ಯಜಾನುನ ಉಪರಿ ದಕ್ಷಿಣಪಾದಂ ಪ್ರತಿಷ್ಠಾಪ್ಯ, ಪವಿತ್ರವಂತೌ ಪಾಣೀ ಸಂಧಾಯ, ಸ್ವಾಧ್ಯಾಯಮಧೀಯೀತ ||

ಓಂ ಭೂರ್ಭುವಸ್ಸುವಃ | ಇತಿ ವ್ಯಾಹೃತಿಂ ಪಠಿತ್ವಾ, ಗಾಯತ್ರೀಂ ಪಚ್ಚೋರ್ಧರ್ಚಶೋಽನವಾನಮುಕ್ತ್ವಾ, ವೇದಾದೀನ್ ಪಠೇತ್ | 

ಓಂ ಅ॒ಗ್ನಿಮೀ॑ಳೇ ಪು॒ರೋಹಿ॑ತಂ ಯ॒ಜ್ಞಸ್ಯ॑ ದೇ॒ವಮೃ॒ತ್ವಿಜಂ॑ | ಹೋತಾ॑ರಂ ರತ್ನ॒ಧಾತ॑ಮಮ್ || 

ಓಂ ಇ॒ಷೇತ್ವೋ॒ರ್ಜೇತ್ವಾ॑ವಾ॒ಯವ॑ಸ್ಸ್ಥೋಪಾ॒ಯವ॑ಸ್ಸ್ಥದೇ॒ವೋವ॑ಸ್ಸವಿ॒ತಾ ಪ್ರಾರ್ಪ॑ಯತು॒ ಶ್ರೇಷ್ಠ॑ತಮಾಯ॒ ಕರ್ಮ॑ಣ॒ ಆಪ್ಯಾ॑ಯಧ್ವಮಘ್ನಿಯಾ ದೇವಭಾ॒ಗಮೂರ್ಜ॑ಸ್ವತೀಃ॒ ಪಯ॑ಸ್ವತೀಃ ಪ್ರ॒ಜಾವ॑ತೀರನಮೀ॒ವಾ ಅ॑ಯ॒ಕ್ಷ್ಮಾಮಾವ॑ಸ್ತೇ॒ನ ಈ॑ಶತ॒ಮಾಘಶ॑ꣳಸೋ ರು॒ದ್ರಸ್ಯ॑ ಹೇ॒ತಿಃ ಪರಿ॑ವೋ ವೃಣಕ್ತು ಧ್ರು॒ವಾ॒ಸ್ಮಿನ್ಗೋಪ॑ತೌ ಸ್ಯಾತ ಬ॒ಹ್ವೀರ್ಯಜ॑ಮಾನಸ್ಯ ಪ॒ಶೂನ್ಪಾ॑ಹಿ || ಯ॒ಜ್ಞಸ್ಯ॑ಘೋ॒ಷದ॑ಸಿ॒ ಪ್ರತ್ಯು॑ಷ್ಟ॒ꣳ ರಕ್ಷಃ॒ ಪ್ರತ್ಯು॑ಷ್ಟಾ॒ ಅರಾ॑ತಯಃ॒ ಪ್ರೇಯಮ॑ಗಾದ್ಧಿ॒ಷಣಾ॑ ಬ॒ರ್ಹಿರಚ್ಚ॒ ಮನು॑ನಾ ಕೃ॒ತಾ ಸ್ವ॒ಧಯಾ॒ ವಿತ॑ಷ್ಟಾ॒ತ ಆವ॑ಹಂತಿ ಕ॒ವಯಃ॑ ಪು॒ರಸ್ತಾ॑॑ ದ್ದೇ॒ವೇಭ್ಯೋ॒ ಜುಷ್ಟ॑ಮಿ॒ಹ ಬ॒ರ್ಹಿರಾ॒ಸದೇ॑ ದೇ॒ವಾನಾಂ॑॑ ಪರಿಷೂ॒ತಮ॑ಸಿ ವ॒ರ್ಷವೃ॑ದ್ಧಮಸಿ॒                ದೇವ॑ಬರ್ಹಿ॒ರ್ಮಾ ತ್ವಾ॒ನ್ವಙ್ಮಾತಿ॒ರ್ಯಕ್ಪರ್ವ॑ತೇ ರಾಧ್ಯಾ ಸಮಾಚ್ಛೇ॒ತ್ತಾತೇ॒ ಮಾರಿ॑ಷಂ॒ ದೇವ॑ ಬರ್ಹಿಶ್ಶ॒ತವ॑ಲ್ಶಂ॒ ವಿರೋ॑ಹ ಸ॒ಹಸ್ರ॑ವಲ್ಶಾಃ॒ ವಿವ॒ಯꣳ ರು॑ಹೇಮ ಪೃಥಿ॒ವ್ಯಾಸ್ಸಂ॒ಪೃಚಃ॑ ಪಾಹಿ ಸುಸಂ॒ಭೃತಾ॑॑ ತ್ವಾ॒ಸಂಭ॑ರಾ॒ಮ್ಯದಿ॑ತ್ಯೈ॒ರಾಸ್ನಾ॑ಽಸೀಂದ್ರಾ॒ಣ್ಯೈ ಸ॒ನ್ನಹ॑ನಂ ಪೂ॒ಷಾತೇ॑॑ ಗ್ರಂ॒ಥಿಂ ಗ್ರ॑ಥ್ನಾತು॒ ಸತೇ॒ ಮಾಸ್ಥಾ॒ದಿಂದ್ರ॑ಸ್ಯ ತ್ವಾ ಬಾ॒ಹುಭ್ಯಾ॒ಮುದ್ಯ॑ಚ್ಛೇ॒ ಬೃಹ॒ಸ್ಪತೇ॑॑ರ್ಮೂ॒ರ್ಧ್ನಾ ಹ॑ರಾಮ್ಯು॒ರ್ವಂ॑ತರಿ॑ಕ್ಷ॒ಮನ್ವಿ॑ಹಿ ದೇವಂಗ॒ಮಮ॑ಸಿ || ಶುಂಧ॑ಧ್ವಂ॒ ದೈವ್ಯಾ॑ಯ॒ ಕರ್ಮ॑ಣೇ ದೇವಯ॒ಜ್ಯಾಯೈ॑ ಮಾತ॒ರಿಶ್ವ॑ನೋ ಘ॒ರ್ಮೋ॑ಽಸಿ॒ ದ್ಯೌರ॑ಸಿ ಪೃಥಿ॒ವ್ಯ॑ಸಿ ವಿ॒ಶ್ವಧಾ॑ಯಾ ಅಸಿಪರ॒ಮೇಣ॒ ಧಾಮ್ನಾ॒ ದೃꣳಹ॑ಸ್ವ॒ಮಾಹ್ವಾ॒ರ್ವಸೂ॑ನಾಂ ಪ॒ವಿತ್ರ॑ಮಸಿ ಶ॒ತಧಾ॑ರಂ॒ ವಸೂ॑ನಾಂ ಪ॒ವಿತ್ರ॑ಮಸಿ ಸ॒ಹಸ್ರ॑ಧಾರꣳ ಹು॒ತಸ್ತೋ॒ಕೋ ಹು॒ತೋ ದ್ರ॒ಪ್ಸೋ॑॑ಽಗ್ನಯೇ॑ ಬೃಹ॒ತೇನಾಕಾ॑ಯ॒ ಸ್ವಾಹಾ॒ ದ್ಯಾವಾ॑ಪೃಥಿ॒ವೀಭ್ಯಾ॒ꣳ ಸಾ ವಿ॒ಶ್ವಾಯು॒ಸ್ಸಾ ವಿ॒ಶ್ವವ್ಯ॑ಚಾ॒ಸ್ಸಾ ವಿ॒ಶ್ವಕ॑ರ್ಮಾ॒ ಸಂಪೃ॑ಚ್ಯಧ್ವಮೃತಾವರೀ ರೂ॒ರ್ಮಿಣೀ॒ರ್ಮಧು॑ಮತ್ತಮಾ ಮಂ॒ದ್ರಾಧನ॑ಸ್ಯ ಸಾ॒ತಯೇ॒ ಸೋ॑ಮೇನ॒ ತ್ವಾತ॑ನ॒ಚ್ಮೀಂದ್ರಾ॑ಯ॒ ದಧಿ॒ ವಿಷ್ಣೋ॑ ಹ॒ವ್ಯꣳರ॑ಕ್ಷಸ್ವ || ಕರ್ಮ॑ಣೇ ವಾಂ ದೇ॒ವೇಭ್ಯ॑ಶ್ಶಕೇಯಂ॒ ವೇಷಾ॑ಯ ತ್ವಾ || 

ಓಂ ಅಗ್ನ॒ ಆ ಯಾ॑ಹಿ ವೀ॒ತಯೇ॑ ಗೃಣಾ॒ನೋ ಹ॒ವ್ಯದಾ॑ತಯೇ | ನಿ॒ ಹೋತಾ॑ ಸತ್ಸಿ ಬ॒ರ್ಹಿಷಿ॑ || 

ಓಂ ಶನ್ನೋ॑ ದೇ॒ವೀರ॒ಭಿಷ್ಟ॑ಯ॒ ಆಪೋ॑ ಭವಂತು ಪೀ॒ತಯೇ॑॑ । ಶಂ ಯೋರ॒ಭಿಸ್ರ॑ವಂತು ನಃ ॥ 

ಓಂ ಅ॒ಗ್ನಿರ್ಮೂ॒ರ್ದ್ಧಾ ದಿ॒ವಃ ಕ॒ಕುತ್ಪತಿಃ॑ ಪೃಥಿ॒ವ್ಯಾ ಅ॒ಯಮ್ । ಅ॒ಪಾ ರೇತಾe॑ಸಿ ಜಿನ್ವತಿ || 

ಓಂ ಯದ್ದೇ॑ವಾ ದೇವ॒ಹೇಳ॑ನಂ॒ ದೇವಾ॑ಸಶ್ಚಕೃ॒ಮಾ ವ॒ಯಂ | ಆದಿ॑ತ್ಯಾ॒ಸ್ತಸ್ಮಾ॑॑ನ್ಮಾಮುಂಚತ॒ರ್ತಸ್ಯ॒ರ್ತೇನ॒ ಮಾಮಿ॒ತ || ದೇವಾ॑ ಜೀವನಕಾ॒ಮ್ಯಾ ಯದ್ವಾ॒ಚಾನೃ॑ತಮೂದಿ॒ಮ | ತಸ್ಮಾ॑॑ನ್ನ ಇ॒ಹ ಮುಂ॑ಚತ॒ ವಿಶ್ವೇ॑ ದೇವಾಸ್ಸ॒ಜೋಷ॑ಸಃ || ಋ॒ತೇನ॑ ದ್ಯಾವಾಪೃಥಿವೀ ಋ॒ತೇನ॒ ತ್ವꣳ ಸ॑ರಸ್ವತಿ | ಕೃ॒ತಾನ್ನಃ॑ ಪಾ॒ಹ್ಯೇನ॑ಸೋ॒ ಯತ್ಕಿಂಚಾನೃ॑ತಮೂದಿ॒ಮ || ಇಂ॒ದ್ರಾ॒ಗ್ನೀ ಮಿ॒ತ್ರಾವರು॑ಣೌ॒ ಸೋಮೋ॑ ಧಾ॒ತಾ ಬೃಹ॒ಸ್ಪತಿಃ॑ | ತೇ ನೋ॑ ಮುಂಚಂ॒ತ್ವೇನ॑ಸೋ॒ ಯದ॒ನ್ಯಕೃ॑ತಮಾರಿ॒ಮ || ಸ॒ಜಾ॒ತ॒ಶ॒ꣳ ಸಾದು॒ತ ವಾ ಜಾ॑ಮಿಶ॒ꣳಸಾಜ್ಜ್ಯಾಯ॑ಸಃ॒ ಶꣳಸಾ॑ದು॒ತ ವಾ॒ ಕನೀ॑ಯಸಃ | ಅನಾ॑ಧೃಷ್ಟಂ ದೇ॒ವಕೃ॑ತಂ॒ ಯದೇನ॒ಸ್ತಸ್ಮಾ॒ತ್ತ್ವಮ॒ಸ್ಮಾಂಜಾ॑ತವೇದೋ ಮುಮುಗ್ಧಿ ||

ಅಥ ಶಿಕ್ಷಾಂ ಪ್ರವಕ್ಷ್ಯಾಮಿ | ಅಮಾವಾಸ್ಯೇನ ವಾ ಪೌರ್ಣಮಾಸ್ಯೇನ ವಾ ಹವಿಷಾ ಯಕ್ಷ್ಯಮಾಣೋ ಭವತಿ | ವೃದ್ಧಿರಾದೈಚ್ | ಸಮಾಮ್ನಾಯಃ ಸಮಾಮ್ನಾತಃ | ಮಯರಸತಜಭನಲಗಸಮ್ಮಿತಮ್ | ಪಂಚ ಸಂವತ್ಸರಮಯಮ್ | ಗ್ಲೌಃ ಗ್ಮಾ ಜ್ಮಾ | ಯೋಗೀಶ್ವರಂ ಯಾಜ್ಞವಲ್ಕ್ಯಮ್ | ನಾರಾಯಣಂ ನಮಸ್ಕೃತ್ಯ | ಅಥಾತೋ ಧರ್ಮಜಿಜ್ಞಾಸಾ | ಅಥಾತೋ ಬ್ರಹ್ಮಜಿಜ್ಞಾಸಾ | 

ಓಂ ನಮೋ॒ ಬ್ರಹ್ಮ॑ಣೇ॒ ನಮೋ॑ ಅಸ್ತ್ವ॒ಗ್ನಯೇ॒ ನಮಃ॑ ಪೃಥಿ॒ವ್ಯೈ ನಮ॒ ಓಷ॑ಧೀಭ್ಯಃ | ನಮೋ॑ ವಾ॒ಚೇ ನಮೋ॑ ವಾ॒ಚಸ್ಪತ॑ಯೇ॒ ನಮೋ॒ ವಿಷ್ಣ॑ವೇ ಬೃಹ॒ತೇ ಕ॑ರೋಮಿ || ಇತಿ ಮಂತ್ರಂ ತ್ರಿಃ ಪಠಿತ್ವಾ || ವಿಷ್ಟಿರಸಿ ವೃಶ್ಚ ಮೇ ಪಾಪ್ಮಾನಮೃತಾತ್ಸತ್ಯಮುಪಾಗಾಮ್ | ಶಿರಶ್ಚಕ್ಷುಷೀ ನಾಸಿಕೇ ಶ್ರೋತ್ರೇ ಹೃದಯಮಾಲಭತೇ ಇತಿ  ಪುನಃ ಜಲಂ ಸ್ಪೃಶೇತ್ || ಅನೇನ ಬ್ರಹ್ಮಯಜ್ಞಕರ್ಮಣಾ ಶ್ರೀ ಪರಮೇಶ್ವರಃ ಪ್ರೀಯತಾಮ್ ||

ಕಾಮೋಕಾರ್ಷೀನ್  ನಮೋ ನಮಃ | ಕಾಮಃ ಕರೋತಿ ನಾಹಮ್ ಕರೋಮಿ ಕಾಮಃ ಕರ್ತಾ ನಾಹಮ್ ಕರ್ತಾ ಕಾಮಃ ಕಾರಯಿತಾ ನಾಹಮ್ ಕಾರಯಿತಾ ಏಷ ತೇ ಕಾಮ ಕಾಮಾಯ ಸ್ವಾಹಾ ||

ಮನ್ಯುರಕಾರ್ಷೀನ್  ನಮೋ ನಮಃ | ಮನ್ಯುಃ ಕರೋತಿ ನಾಹಮ್ ಕರೋಮಿ ಮನ್ಯುಃ ಕರ್ತಾ ನಾಹಮ್ ಕರ್ತಾ ಮನ್ಯುಃ ಕಾರಯಿತಾ ನಾಹಮ್ ಕಾರಯಿತಾ ಏಷ ತೇ ಮನ್ಯೋ ಮನ್ಯವೇ ಸ್ವಾಹಾ ||


Tuesday, August 25, 2026

ಪಾಣಿನೀಯ ಶಿಕ್ಷಾ

ಅಥ ಶಿಕ್ಷಾಂ ಪ್ರವಕ್ಷ್ಯಾಮಿ ಪಾಣಿನೀಯಂ ಮತಂ ಯಥಾ ।
ಶಾಸ್ತ್ರಾನುಪೂರ್ವಂ ತದ್ವಿದ್ಯಾದ್ಯಥೋಕ್ತಂ ಲೋಕವೇದಯೋಃ ॥ 1॥
ಪ್ರಸಿದ್ಧಮಪಿ ಶಬ್ದಾರ್ಥಮವಿಜ್ಞಾತಮಬುದ್ಧಿಭಿಃ ।
ಪುನರ್ವ್ಯಕ್ತೀಕರಿಷ್ಯಾಮಿ ವಾಚ ಉಚ್ಚಾರಣೇ ವಿಧಿಮ್ ॥ 2॥
ತ್ರಿಷಷ್ಟಿಶ್ಚತುಃಷಷ್ಟಿರ್ವಾ ವರ್ಣಾಃ ಶಂಭುಮತೇ ಮತಾಃ ।
ಪ್ರಾಕೃತೇ ಸಂಸ್ಕೃತೇ ಚಾಪಿ ಸ್ವಯಂ ಪ್ರೋಕ್ತಾಃ ಸ್ವಯಂಭುವಾ ॥ 3॥
ಸ್ವರಾವಿಂಶತಿರೇಕಶ್ಚ ಸ್ಪರ್ಶಾನಾಂ ಪಂಚವಿಂಶತಿಃ ।
ಯಾದಯಶ್ಚ ಸ್ಮೃತಾ ಹ್ಯಷ್ಟೌ ಚತ್ವಾರಶ್ಚ ಯಮಾಃ ಸ್ಮೃತಾಃ ॥ 4॥
ಅನುಸ್ವಾರೋ ವಿಸರ್ಗಶ್ಚ ಕ ಪೌ ಚಾಪಿ ಪರಾಶ್ರಿತೌ ।
ದುಸ್ಪೃಷ್ಟಶ್ಚೇತಿ ವಿಜ್ಞೇಯೋ ೡಕಾರಃ ಪ್ಲುತ ಏವ ಚ ॥ 5॥
ಆತ್ಮಾ ಬುದ್ಧ್ಯಾ ಸಮೇತ್ಯಾರ್ಥಾನ್ಮನೋಯುಂಕ್ತೇ ವಿವಕ್ಷಯಾ ।
ಮನಃ ಕಾಯಾಗ್ನಿಮಾಹಂತಿ ಸ ಪ್ರೇರಯತಿ ಮಾರುತಮ್ ॥ 6॥
ಮಾರುಸ್ತೂರಸಿಚರನ್ಮಂದ್ರಂ ಜನಯತಿ ಸ್ವರಮ್ ।
ಪ್ರಾತಃಸವನಯೋಗಂ ತಂ ಛಂದೋಗಾಯತ್ರಮಾಶ್ರಿತಮ್ ॥ 7॥
ಕಂಠೇಮಾಧ್ಯಂದಿನಯುಗಂ ಮಧ್ಯಮಂ ತ್ರೈಷ್ಟುಭಾನುಗಮ್ ।
ತಾರಂ ತಾರ್ತೀಯಸವನಂ ಶೀರ್ಷಣ್ಯಂ ಜಾಗತಾನುಗತಮ್ ॥ 8॥
ಸೋದೀರ್ಣೋ ಮೂರ್ಧ್ನ್ಯಭಿಹತೋವಕ್ರಮಾಪದ್ಯ ಮಾರುತಃ ।
ವರ್ಣಾಂಜನಯತೇತೇಷಾಂ ವಿಭಾಗಃ ಪಂಚಧಾ ಸ್ಮೃತಃ ॥ 9॥
ಸ್ವರತಃ ಕಾಲತಃ ಸ್ಥಾನಾತ್ ಪ್ರಯತ್ನಾನುಪ್ರದಾನತಃ ।
ಇತಿ ವರ್ಣವಿದಃ ಪ್ರಾಹುರ್ನಿಪುಣಂ ತನ್ನಿಬೋಧತ ॥ 10॥
ಉದಾತ್ತಶ್ಚಾನುದಾತ್ತಶ್ಚ ಸ್ವರಿತಶ್ಚ ಸ್ವರಾಸ್ತ್ರಯಃ ।
ಹ್ರಸ್ವೋ ದೀರ್ಘಃ ಪ್ಲುತ ಇತಿ ಕಾಲತೋ ನಿಯಮಾ ಅಚಿ ॥ 11॥
ಉದಾತ್ತೇ ನಿಷಾದಗಾಂಧಾರಾವನುದಾತ್ತ ಋಷಭಧೈವತೌ ।
ಸ್ವರಿತಪ್ರಭವಾ ಹ್ಯೇತೇ ಷಡ್ಜಮಧ್ಯಮಪಂಚಮಾಃ ॥ 12॥
ಅಷ್ಟೌಸ್ಥಾನಾನಿ ವರ್ಣಾನಾಮುರಃ ಕಂಠಃ ಶಿರಸ್ತಥಾ ।
ಜಿಹ್ವಾಮೂಲಂ ಚ ದಂತಾಶ್ಚ ನಾಸಿಕೋಷ್ಠೌಚ ತಾಲು ಚ ॥ 13॥
ಓಭಾವಶ್ಚ ವಿವೃತ್ತಿಶ್ಚ ಶಷಸಾ ರೇಫ ಏವ ಚ ।
ಜಿಹ್ವಾಮೂಲಮುಪಧ್ಮಾ ಚ ಗತಿರಷ್ಟವಿಧೋಷ್ಮಣಃ ॥ 14॥
ಯದ್ಯೋಭಾವಪ್ರಸಂಧಾನಮುಕಾರಾದಿ ಪರಂ ಪದಮ್ ।
ಸ್ವರಾಂತಂ ತಾದೃಶಂ ವಿದ್ಯಾದ್ಯದನ್ಯದ್ವ್ಯಕ್ತಮೂಷ್ಮಣಃ ॥ 15॥
ಹಕಾರಂ ಪಂಚಮೈರ್ಯುಕ್ತಮಂತಃಸ್ಥಾಭಿಶ್ಚ ಸಂಯುತಮ್ ।
ಉರಸ್ಯಂ ತಂ ವಿಜಾನೀಯಾತ್ಕಂಠ್ಯಮಾಹುರಸಂಯುತಮ್ ॥ 16॥
ಕಂಠ್ಯಾವಹಾವಿಚುಯಶಾಸ್ತಾಲವ್ಯಾ ಓಷ್ಠಜಾವುಪೂ ।
ಸ್ಯುರ್ಮೂರ್ಧನ್ಯಾ ಋಟುರಷಾ ದಂತ್ಯಾ ಌತುಲಸಾಃ ಸ್ಮೃತಾಃ ॥ 17॥
ಜಿಹ್ವಾಮೂಲೇ ತು ಕುಃ ಪ್ರೋಕ್ತೋ ದಂತ್ಯೋಷ್ಠ್ಯೋ ವಃ ಸ್ಮೃತೋ ಬುಧೈಃ ।
ಏಐ ತು ಕಂಠತಾಲವ್ಯಾ ಓಔ ಕಂಠೋಷ್ಠಜೌ ಸ್ಮೃತೌ ॥ 18॥
ಅರ್ಧಮಾತ್ರಾ ತು ಕಂಠ್ಯಸ್ಯ ಏಕಾರೈಕಾರಯೋರ್ಭವೇತ್ ।
ಓಕಾರೌಕಾರಯೋರ್ಮಾತ್ರಾ ತಯೋರ್ವಿವೃತಸಂವೃತಮ್ ॥ 19॥
ಸಂವೃತಂ ಮಾತ್ರಿಕಂ ಜ್ಞೇಯಂ ವಿವೃತಂ ತು ದ್ವಿಮಾತ್ರಿಕಮ್ ।
ಘೋಷಾ ವಾ ಸಂವೃತಾಃ ಸರ್ವೇ ಅಘೋಷಾ ವಿವೃತಾಃ ಸ್ಮೃತಾಃ ॥ 20॥
ಸ್ವರಾಣಾಮೂಷ್ಮಣಾಂ ಚೈವ ವಿವೃತಂ ಕರಣಂ ಸ್ಮೃತಮ್ ।
ತೇಭ್ಯೋಽಪಿ ವಿವೃತಾವೇಙೌ ತಾಭ್ಯಾಮೈಚೌ ತಥೈವ ಚ ॥ 21॥
ಅನುಸ್ವಾರಯಮಾನಾಂ ಚ ನಾಸಿಕಾ ಸ್ಥಾನಮುಚ್ಯತೇ ।
ಅಯೋಗವಾಹಾ ವಿಜ್ಞೇಯಾ ಆಶ್ರಯಸ್ಥಾನಭಾಗಿನಃ ॥ 22॥
ಅಲಾಬುವೀಣಾನಿರ್ಘೋಷೋ ದಂತ್ಯಮೂಲ್ಯಸ್ವರಾನುಗಃ ।
ಅನುಸ್ವಾರಸ್ತು ಕರ್ತವ್ಯೋ ನಿತ್ಯಂ ಹ್ರೋಃ ಶಷಸೇಷು ಚ ॥ 23॥
ಅನುಸ್ವಾರೇ ವಿವೃತ್ತ್ಯಾಂ ತು ವಿರಾಮೇ ಚಾಕ್ಷರದ್ವಯೇ ।
ದ್ವಿರೋಷ್ಠ್ಯೌ ತು ವಿಗೃಹ್ಣೀಯಾದ್ಯತ್ರೋಕಾರವಕಾರಯೋಃ ॥ 24॥
ವ್ಯಾಘ್ರೀ ಯಥಾ ಹರೇತ್ಪುತ್ರಾಂದಂಷ್ಟ್ರಾಭ್ಯಾಂ ನ ಚ ಪೀಡಯೇತ್ ।
ಭೀತಾ ಪತನಭೇದಾಭ್ಯಾಂ ತದ್ವದ್ವರ್ಣಾನ್ಪ್ರಯೋಜಯೇತ್ ॥ 25॥
ಯಥಾ ಸೌರಾಷ್ಟ್ರಿಕಾ ನಾರೀ ತಕ್ರँ ಇತ್ಯಭಿಭಾಷತೇ ।
ಏವಂ ರಂಗಾಃ ಪ್ರಯೋಕ್ತವ್ಯಾಃ ಖೇ ಅರಾँ ಇವ ಖೇದಯಾ ॥ 26॥
ರಂಗವರ್ಣಂ ಪ್ರಯುಂಜೀರನ್ನೋ ಗ್ರಸೇತ್ಪೂರ್ವಮಕ್ಷರಮ್ ।
ದೀರ್ಘಸ್ವರಂ ಪ್ರಯುಂಜೀಯಾತ್ಪಶ್ಚಾನ್ನಾಸಿಕ್ಯಮಾಚರೇತ್ ॥ 27॥
ಹೃದಯೇ ಚೈಕಮಾತ್ರಸ್ತ್ವರ್ದ್ಧಮಾತ್ರಸ್ತು ಮೂರ್ದ್ಧನಿ ।
ನಾಸಿಕಾಯಾಂ ತಥಾರ್ದ್ಧಂ ಚ ರಂಗಸ್ಯೈವಂ ದ್ವಿಮಾತ್ರತಾ ॥ 28॥
ಹೃದಯಾದುತ್ಕರೇ ತಿಷ್ಠನ್ಕಾಂಸ್ಯೇನ ಸಮನುಸ್ವರನ್ ।
ಮಾರ್ದವಂ ಚ ದ್ವಿಮಾತ್ರಂ ಚ ಜಘನ್ವಾँ ಇತಿ ನಿದರ್ಶನಮ್ ॥ 29॥
ಮಧ್ಯೇ ತು ಕಂಪಯೇತ್ಕಂಪಮುಭೌ ಪಾರ್ಶ್ವೌ ಸಮೌ ಭವೇತ್ ।
ಸರಂಗಂ ಕಂಪಯೇತ್ಕಂಪಂ ರಥೀವೇತಿ ನಿದರ್ಶನಮ್ ॥ 30॥
ಏವಂ ವರ್ಣಾಃ ಪ್ರಯೋಕ್ತವ್ಯಾ ನಾವ್ಯಕ್ತಾ ನ ಚ ಪೀಡಿತಾಃ ।
ಸಮ್ಯಗ್ವರ್ಣಪ್ರಯೋಗೇಣ ಬ್ರಹ್ಮಲೋಕೇ ಮಹೀಯತೇ ॥ 31॥
ಗೀತೀ ಶೀಘ್ರೀ ಶಿರಃಕಂಪೀ ತಥಾ ಲಿಖಿತಪಾಠಕಃ ।
ಅನರ್ಥಜ್ಞೋಽಲ್ಪಕಂಠಶ್ಚ ಷಡೇತೇ ಪಾಠಕಾಧಮಾಃ ॥ 32॥
ಮಾಧುರ್ಯಮಕ್ಷರವ್ಯಕ್ತಿಃ ಪದಚ್ಛೇದಸ್ತು ಸುಸ್ವರಃ ।
ಧೈರ್ಯಂ ಲಯಸಮರ್ಥಂ ಚ ಷಡೇತೇ ಪಾಠಕಾ ಗುಣಾಃ ॥ 33॥
ಶಂಕಿತಂ ಭೀತಿಮುದ್ಘೃಷ್ಟಮವ್ಯಕ್ತಮನುನಾಸಿಕಮ್ ।
ಕಾಕಸ್ವರಂ ಶಿರಸಿಗಂ ತಥಾ ಸ್ಥಾನವಿವಜಿರ್ತಮ್ ॥ 34॥
ಉಪಾಂಶುದಷ್ಟಂ ತ್ವರಿತಂ ನಿರಸ್ತಂ ವಿಲಂಬಿತಂ ಗದ್ಗದಿತಂ ಪ್ರಗೀತಮ್ ।
ನಿಷ್ಪೀಡಿತಂ ಗ್ರಸ್ತಪದಾಕ್ಷರಂ ಚ ವದೇನ್ನ ದೀನಂ ನ ತು ಸಾನುನಾಸ್ಯಮ್ ॥ 35॥
ಪ್ರಾತಃ ಪಠೇನ್ನಿತ್ಯಮುರಃಸ್ಥಿತೇನ ಸ್ವರೇಣ ಶಾರ್ದೂಲರುತೋಪಮೇನ ।
ಮಧ್ಯಂದಿನೇ ಕಂಠಗತೇನ ಚೈವ ಚಕ್ರಾಹ್ವಸಂಕೂಜಿತಸನ್ನಿಭೇನ ॥ 36॥
ತಾರಂ ತು ವಿದ್ಯಾತ್ಸವನಂ ತೃತೀಯಂ ಶಿರೋಗತಂ ತಚ್ಚ ಸದಾ ಪ್ರಯೋಜ್ಯಮ್ ।
ಮಯೂರಹಂಸಾನ್ಯಭೃತಸ್ವರಾಣಾಂ ತುಲ್ಯೇನ ನಾದೇನ ಶಿರಃಸ್ಥಿತೇನ ॥ 37॥
ಅಚೋಽಸ್ಪೃಷ್ಟಾ ಯಣಸ್ತ್ವೀಷನ್ನೇಮಸ್ಪೃಷ್ಟಾಃ ಶಲಃ ಸ್ಮೃತಾಃ ।
ಶೇಷಾಃ ಸ್ಪೃಷ್ಟಾ ಹಲಃ ಪ್ರೋಕ್ತಾ ನಿಬೋಧಾನುಪ್ರದಾನತಃ ॥ 38॥
ಞಮೋನುನಾಸಿಕಾ ನ ಹ್ರೌ ನಾದಿನೋ ಹಝಷಃ ಸ್ಮೃತಾಃ ।
ಈಷನ್ನಾದಾ ಯಣೋ ಜಶಃ ಶ್ವಾಸಿನಸ್ತು ಖಫಾದಯಃ ॥ 39॥
ಈಷಚ್ಛ್ವಾಸಾಂಶ್ಚರೋ ವಿದ್ಯಾದ್ಗೋರ್ಧಾಮೈತತ್ಪ್ರಚಕ್ಷತೇ ।
ದಾಕ್ಷೀಪುತ್ರಪಾಣಿನಿನಾ ಯೇನೇದಂ ವ್ಯಾಪಿತಂ ಭುವಿ ॥ 40॥
ಛಂದಃ ಪಾದೌ ತು ವೇದಸ್ಯ ಹಸ್ತೌ ಕಲ್ಪೋಽಥ ಪಠ್ಯತೇ ।
ಜ್ಯೋತಿಷಾಮಯನಂ ಚಕ್ಷುರ್ನಿರುಕ್ತಂ ಶ್ರೋತ್ರಮುಚ್ಯತೇ ॥ 41॥
ಶಿಕ್ಷಾ ಘ್ರಾಣಂ ತು ವೇದಸ್ಯ ಮುಖಂ ವ್ಯಾಕರಣಂ ಸ್ಮೃತಮ್ ।
ತಸ್ಮಾತ್ಸಾಂಗಮಧೀತ್ಯೈವ ಬ್ರಹ್ಮಲೋಕೇ ಮಹೀಯತೇ ॥ 42॥
ಉದಾತ್ತಮಾಖ್ಯಾತಿ ವೃಷೋಽಂಗುಲೀನಾಂ ಪ್ರದೇಶಿನೀಮೂಲನಿವಿಷ್ಟಮೂರ್ಧಾ ।
ಉಪಾಂತಮಧ್ಯೇ ಸ್ವರಿತಂ ದ್ರುತಂ ಚ ಕನಿಷ್ಠಕಾಯಾಮನುದಾತ್ತಮೇವ ॥ 43॥
ಉದಾತ್ತಂ ಪ್ರದೇಶಿನೀಂ ವಿದ್ಯಾತ್ಪ್ರಚಯಂ ಮಧ್ಯತೋಽಂಗುಲಿಮ್ ।
ನಿಹತಂ ತು ಕನಿಷ್ಠಿಕ್ಯಾಂ ಸ್ವರಿತೋಪಕನಿಷ್ಠಿಕಾಮ್ ॥ 44॥
ಅಂತೋದಾತ್ತಮಾದ್ಯುದಾತ್ತಮುದಾತ್ತಮನುದಾತ್ತಂ ನೀಚಸ್ವರಿತಮ್ ।
ಮಧ್ಯೋದಾತ್ತಂ ಸ್ವರಿತಂ ದ್ವ್ಯುದಾತ್ತಂ ತ್ರ್ಯುದಾತ್ತಮಿತಿ ನವಪದಶಯ್ಯಾ ॥ 45॥
ಅಗ್ನಿಃ ಸೋಮಃ ಪ್ರ ವೋ ವೀರ್ಯಂ ಹವಿಷಾಂ ಸ್ವರ್ಬೃಹಸ್ಪತಿರಿಂದ್ರಾಬೃಹಸ್ಪತೀ ।
ಅಗ್ನಿರಿತ್ಯಂತೋದಾತ್ತಂ ಸೋಮ ಇತ್ಯಾದ್ಯುದಾತ್ತಮ್ ।
ಪ್ರೇತ್ಯುದಾತ್ತಂ ವ ಇತ್ಯನುದಾತ್ತಂ ವೀರ್ಯಂ ನೀಚಸ್ವರಿತಮ್ ॥ 46॥
ಹವಿಷಾಂ ಮಧ್ಯೋದಾತ್ತಂ ಸ್ವರಿತಿ ಸ್ವರಿತಮ್ ।
ಬೃಹಸ್ಪತಿರಿತಿ ದ್ವ್ಯುದಾತ್ತಮಿಂದ್ರಾಬೃಹಸ್ಪತೀ ಇತಿ ತ್ರ್ಯುದಾತ್ತಮ್ ॥ 47॥
ಅನುದಾತ್ತೋ ಹೃದಿ ಜ್ಞೇಯೋ ಮೂರ್ಧ್ನ್ಯುದಾತ್ತ ಉದಾಹೃತಃ ।
ಸ್ವರಿತಃ ಕರ್ಣಮೂಲೀಯಃ ಸರ್ವಾಸ್ಯೇ ಪ್ರಚಯಃ ಸ್ಮೃತಃ ॥ 48॥
ಚಾಷಸ್ತು ವದತೇ ಮಾತ್ರಾಂ ದ್ವಿಮಾತ್ರಂ ಚೈವ ವಾಯಸಃ ।
ಶಿಖೀ ರೌತಿ ತ್ರಿಮಾತ್ರಂ ತು ನಕುಲಸ್ತ್ವರ್ಧಮಾತ್ರಕಮ್ ॥ 49॥
ಕುತೀರ್ಥಾದಾಗತಂ ದಗ್ಧಮಪವರ್ಣಂ ಚ ಭಕ್ಷಿತಮ್ ।
ನ ತಸ್ಯ ಪಾಠೇ ಮೋಕ್ಷೋಽಸ್ತಿ ಪಾಪಾಹೇರಿವ ಕಿಲ್ಬಿಷಾತ್ ॥ 50॥
ಸುತೀರ್ಥಾದಗತಂ ವ್ಯಕ್ತಂ ಸ್ವಾಮ್ನಾಯ್ಯಂ ಸುವ್ಯವಸ್ಥಿತಮ್ ।
ಸುಸ್ವರೇಣ ಸುವಕ್ತ್ರೇಣ ಪ್ರಯುಕ್ತಂ ಬ್ರಹ್ಮ ರಾಜತೇ ॥ 51॥
ಮಂತ್ರೋ ಹೀನಃ ಸ್ವರತೋ ವರ್ಣತೋ ವಾ ಮಿಥ್ಯಾಪ್ರಯುಕ್ತೋ ನ ತಮರ್ಥಮಾಹ ।
ಸ ವಾಗ್ವಜ್ರೋ ಯಜಮಾನಂ ಹಿನಸ್ತಿ ಯಥೇಂದ್ರಶತ್ರುಃ ಸ್ವರತೋಽಪರಾಧಾತ್ ॥
ಅನಕ್ಷರಂ ಹತಾಯುಷ್ಯಂ ವಿಸ್ವರಂ ವ್ಯಾಧಿಪೀಡಿತಮ್ ।
ಅಕ್ಷತಾ ಶಸ್ತ್ರರೂಪೇಣ ವಜ್ರಂ ಪತತಿ ಮಸ್ತಕೇ ॥ 53॥
ಹಸ್ತಹೀನಂ ತು ಯೋಽಧೀತೇ ಸ್ವರವರ್ಣವಿವರ್ಜಿತಮ್ ।
ಋಗ್ಯಜುಃಸಾಮಭಿರ್ದಗ್ಧೋ ವಿಯೋನಿಮಧಿಗಚ್ಛತಿ ॥ 54॥
ಹಸ್ತೇನ ವೇದಂ ಯೋಽಧೀತೇ ಸ್ವರವರ್ಣರ್ಥಸಂಯುತಮ್ ।
ಋಗ್ಯಜುಃಸಾಮಭಿಃ ಪೂತೋ ಬ್ರಹ್ಮಲೋಕೇ ಮಹೀಯತೇ ॥ 55॥
ಶಂಕರಃ ಶಾಂಕರೀಂ ಪ್ರಾದಾದ್ದಾಕ್ಷೀಪುತ್ರಾಯ ಧೀಮತೇ ।
ವಾಙ್ಮಯೇಭ್ಯಃ ಸಮಾಹೃತ್ಯ ದೇವೀಂ ವಾಚಮಿತಿ ಸ್ಥಿತಿಃ ॥ 56॥
ಯೇನಾಕ್ಷರಸಮಾಮ್ನಾಯಮಧಿಗಮ್ಯ ಮಹೇಶ್ವರಾತ್ ।
ಕೃತ್ಸ್ನಂ ವ್ಯಾಕರಣಂ ಪ್ರೋಕ್ತಂ ತಸ್ಮೈ ಪಾಣಿನಯೇ ನಮಃ ॥ 57॥
ಯೇನ ಧೌತಾ ಗಿರಃ ಪುಂಸಾಂ ವಿಮಲೈಃ ಶಬ್ದವಾರಿಭಿಃ ।
ತಮಶ್ಚಾಜ್ಞಾನಜಂ ಭಿನ್ನಂ ತಸ್ಮೈ ಪಾಣಿನಯೇ ನಮಃ ॥ 58॥
ಅಜ್ಞಾನಾಂಧಸ್ಯ ಲೋಕಸ್ಯ ಜ್ಞಾನಾಂಜನಶಲಾಕಯಾ ।
ಚಕ್ಷುರುನ್ಮೀಲಿತಂ ಯೇನ ತಸ್ಮೈ ಪಾಣಿನಯೇ ನಮಃ ॥ 59॥
ತ್ರಿನಯನಮಭಿಮುಖನಿಃಸೃತಾಮಿಮಾಂ ಯ ಇಹ ಪಠೇತ್ಪ್ರಯತಶ್ಚ ಸದಾ ದ್ವಿಜಃ ।
ಸ ಭವತಿ ಧನಧಾನ್ಯಪಶುಪುತ್ರಕೀರ್ತಿಮಾನ್ ಅತುಲಂ ಚ ಸುಖಂ ಸಮಶ್ನುತೇ ದಿವೀತಿ ದಿವೀತಿ ॥ 60॥
॥ ಇತಿ ವೇದಾಂಗನಾಸಿಕಾ ಅಥವಾ ಪಾಣಿನೀಯಶಿಕ್ಷಾ ಸಮಾಪ್ತಾ ॥