ಇದು ನಮ್ಮ
ಸಂಸ್ಕೃತಿಯ ಸ್ಮಾರಕವೂ
ಹೌದು. ಹಿಂದಿನ
ಶುಭ ಸ್ಮರಣೆಯ
ಜೊತೆಗೆ ಇಂದಿನವರಿಗೂ
ಪ್ರೇರಣೆಯನ್ನು ನೀಡುವ
ಪೂರಕ ತಾಣ
ಇದು. ಅದೆಷ್ಟೋ
ಹಿರಿಚೇತನಗಳು ಪೂರ್ಣತೆಯ
ಗರಿಮೆಯನ್ನು ಅನುಭವಿಸಿದ
ಸ್ಥಾನ
ಇದು.
ನಮಗೆ ಇಂಥ ಸ್ಥಾನವನ್ನು ನೋಡಲು ಸಾಧ್ಯವಾದದ್ದೇ, ನಮ್ಮ ಭಾಗ್ಯ! ಎಂದರೆ ಅತಿಶಯೋಕ್ತಿಯಲ್ಲ!
ಇಲ್ಲಿ
ಪ್ರತಿ ಹೆಜ್ಜೆಗೂ
ಗಾಳಿಯ ತಂಪು,
ಬೆಟ್ಟಗಳ ಗುಂಪು,
ಮರಗಿಡಗಳ ಸೊಂಪು,
ನೀರವತೆಯ ಇಂಪು,
ಅವಗಡಗಳ ಕಂಪು
ನಮ್ಮನ್ನು ಸೋಂಕುತ್ತಿರುತ್ತದೆ.
ನಿಜ ಹೇಳಬೇಕೆಂದರೆ :::
ಅಲ್ಲಿಂದ ತಿರುಗಿಬಂದ
ಮೇಲೂ ನಮ್ಮ
ಮನಸ್ಸು ಕೊಡಚಾದ್ರಿಯಲ್ಲೇ ಇತ್ತು!
"ಕೊಡಚಾದ್ರಿಯಲ್ಲಿ ಸಂಚರಿಸಿ ಕುಳಿತಿರುವಾಗ
ನಮಗೆ ಮನಸ್ಸು
ಇಲ್ಲವೇನೋ ಅನಿಸಿತ್ತು."
-papu!