Pashya
’ತಂತ್ರ’ ಕರ್ಮಕಾಂಡವೂ ಅಲ್ಲ. ಬರಿಯ ಜ್ಞಾನ ಕಾಂಡವೂ ಅಲ್ಲ. ಅದು ಇವೆರಡರ ಅರ್ಥಪೂರ್ಣ ಸಮನ್ವಯದಿಂದ ಹುಟ್ಟಿಕೊಂಡ ಉಪಾಸನಾಕಾಂಡ. ನಮಗೆ ಬೇಕಾದುದನ್ನು ಪರೋಕ್ಷ ಶಕ್ತಿಗಳ ನೆರವಿನಿಂದ ಪಡೆದುಕೊಳ್ಳಬಹುದು, ಪಡೆದುಕೊಳ್ಳಬೇಕೆನ್ನುವ ಕರ್ಮಕಾಂಡವು, ಪ್ರತ್ಯಕ್ಷ-ಪರೋಕ್ಷಗಳಿಗೆ ’ಕೊಡು-ಕೊಳೆ’ ಸಂಬಂಧವಲ್ಲದೆ ಅದಕ್ಕಿಂತ ಬೇರೆಯಾದ ಸಂಬಂಧವನ್ನು ಬಗೆಯಲು ಅಶಕ್ತವಾಗಿದೆ. ’ತಂತ್ರ’ವಾದರೋ ಈ ಕೊಡು-ಕೊಳ್ಳು ಸಂಬಂಧವನ್ನೊಪ್ಪಿಯೂ ಪರೋಕ್ಷ ಶಕ್ತಿಗಳ ಜತೆ ಬೇರೆಯೇ ಆದ ಸಂಬಂಧವನ್ನು ಕಂಡರಿಸುತ್ತದೆ ಮತ್ತು ಆ ಪರೋಕ್ಷ ಶಕ್ತಿಗಳು ನಮ್ಮಿಂದ ಬೇರೆಯಲ್ಲ ಎಂಬಷ್ಟು ದೂರ ’ತಂತ್ರ’ ನಮ್ಮನ್ನು ಒಯ್ಯುತ್ತದೆ. ಹಾಗೆಯೇ ನಮ್ಮ ಪ್ರಜ್ಞೆಯನ್ನು (ಸಂವಿತ್) ಎಲ್ಲ ಉಪಾಧಿಗಳಿಂದ- ಎಲ್ಲ ಬಗೆಯConditioningಗಳಿಂದ- ಬಿಡುಗಡೆಗೊಳಿಸಬೇಕೆನ್ನುವ ಜ್ಞಾನಕಾಂಡದ ಆದರ್ಶವನ್ನು ಒಪ್ಪಿಯೂ. ’ತಂತ್ರ’ವು ಈ ಬಿಡುಗಡೆಯನ್ನು ಸೃಷ್ಟಿ ಮುಖದಿಂದ ಸಾಧಿಸಬಹುದೆನ್ನುತ್ತದೆ. ಹೀಗೆ ’ತಂತ್ರ’ಕ್ಕೆ ಯಾವುದೂ ಹೊರತಲ್ಲ.
ತೋಳ್ಪಾಡಿ ಸೌಂದರ್ಯ ಲಹರಿ<<<<<-papu!

’ತಂತ್ರ’
ಪದಕ್ಕಿರುವ ಅನೇಕ ಅರ್ಥಗಳಲ್ಲಿ- ವಿಸ್ತಾರಗೊಳ್ಳುವಿಕೆ, ಹಬ್ಬುವಿಕೆ, ವಿಶದಗೊಳ್ಳುವಿಕೆ ಎನ್ನುವುದು ಮುಖ್ಯವಾದ
ಅರ್ಥವಾಗಿದೆ ಎನ್ನುವುದನ್ನು ಗಮನಿಸಬೇಕು. ಮತ್ತು ವಿಸ್ತಾರ, ವೈವಿಧ್ಯ,
ಬಹು-ರೂಪತೆ ಎನ್ನುವುದು ಸೃಷ್ಟಿಯ ಧರ್ಮ ಎನ್ನುವುದನ್ನು ಲಕ್ಷಿಸಬೇಕು. ಈ
ಸೃಷ್ಟಿಯ ಮೂಲದಲ್ಲಿರುವುದು ತಾನು ಬಹುವಾಗಬೇಕೆಂಬ ಒಂದು ’ಸಂಕಲ್ಪ’
ಎನ್ನುವ ಉಪನಿಷತ್ತಿನ ಹೊಳಹನ್ನು ’ತಂತ್ರ’ ತನ್ನೆದೆಯಲ್ಲಿ ಹೊತ್ತುಕೊಂಡಿದೆ. ವಿಸ್ತಾರವಾಗುವುದೆಂದಾಗ ವಿರೋಧಗಳನ್ನು ತಡೆಗಳನ್ನು
ಮೀರುತ್ತ ಹೋಗುವುದು ಮತ್ತು ವಿರೋಧಗಳನ್ನು ಮೀರುವುದೆಂದರೆ ಯಾವುದನ್ನು ವಿರೋಧಗಳೆಂದು
ಬಗೆದಿರುವೆವೋ ಅವು ನಿಜಕ್ಕೂ ವಿರೋಧಗಳಲ್ಲ ಎಂಬ ಕಾಣ್ಕೆಯ ಅವಸ್ಥೆಯನ್ನು ಮುಟ್ಟುವುದು ಎಂದೇ
ಅರ್ಥವಾಗುತ್ತದೆ. ಈ ಕಾಣ್ಕೆಗೆ ಅನುಗುಣವಾಗಿಯೇ ’ಭೋಗ’ ಮತ್ತು ’ಮೋಕ್ಷ’ಗಳು ಪರಸ್ಪರ
ವಿರುದ್ಧ ಸ್ಥಿತಿಗಳೆಂದು ’ತಂತ್ರ’ ಬಗೆಯುವುದಿಲ್ಲ.
ಇವು ವಿರುದ್ಧ ಸ್ಥಿತಿಗಳೆಂದು, ಒಂದಿದ್ದರೆ ಇನ್ನೊಂದಿಲ್ಲವೆಂದು
ತಿಳಿಯುವ ಶ್ರದ್ಧೆಗಳೇ ಇರುವಾಗ ’ತಂತ್ರ’ದ ಈ
ನಿಲುವು ಕ್ರಾಂತಿಕಾರಕವಾದ ಹೊಸ ಕಾಣ್ಕೆಯಾಗಿದೆ. ಶ್ರೀ ಸುಂದರೀ ಸೇವನ ತತ್ಪರಾಣಾಂ ಭುಕ್ತಿಶ್ಚ
ಮುಕ್ತಿಶ್ಚ ಕರಸ್ಥ ಏವ ಶ್ರೀ ವಿದ್ಯೆಯ ಉಪಾಸಕನಿಗೆ ಭುಕ್ತಿ ಮುಕ್ತಿಗಳೆರಡೂ ಅಂಗೈಯಲ್ಲಿ
ನೆಲಸಿವೆ- ಎನ್ನುವುದು ’ತಂತ್ರ’ದ ಮಾತು,
ಭರವಸೆ ಮತ್ತು ಕಾಣ್ಕೆ. ಈ ಕಾಣ್ಕೆಯೇ ಉಪಾಸನಾಕಾಂಡದ ನೆಲೆ. ಇದೇ ವ್ಯಾಸ ಮತ್ತು ನಮ್ಮ ನಾರಣಪ್ಪ ಚಿತ್ರಿಸಿದ ಕೃಷ್ಣನ ವ್ಯಕ್ತಿತ್ವದ ನೆಲೆ. ಇದೇ
ನಮ್ಮ ರತ್ನಾಕರವರ್ಣಿ ಚಿತ್ರಿಸಿದ ಭರತನ ನೆಲೆ. ಭೋಗ-ಯೋಗಗಳಲ್ಲಿ ಒಂದನ್ನು ಬಿಟ್ಟು ಇನ್ನೊಂದಿದೆ
ಎಂಬ ತಿಳುವಳಿಕೆಯಲ್ಲಿಯೇ ಏನೋ ಒಂದು ಅರಕೆ ಇದೆ ಎಂದು ’ತಂತ್ರ’
ಭಾವಿಸುತ್ತದೆ. ಬದುಕನ್ನು ಹಾಗೆ ನೋಡಲು ಸಾಧ್ಯವಾಗುವುದಾದರೆ, ಬದುಕೆನ್ನುವುದು ಅಭಂಗ; ಅಖಂಡ ವಸ್ತುವಾಗಿದೆ. ಆದುದರಿಂದಲೇ
ಇಂಥ ಬದುಕನ್ನು ’ಸತ್’ ಎಂದು ’ಇರುವಿಕೆ’ ಎಂದು ಉಪನಿಷತ್ತು ಗ್ರಹಿಸಿತು. ಇಂಥ ಬದುಕಿನಿಂದಲೇ ಹುಟ್ಟಿಕೊಂಡ ’ಅರಿವು’ ಕೂಡಾ ಅಭಂಗ ಎಂದು ಅರಿವನ್ನು ’ಚಿತ್’ ಎಂದು ಗ್ರಹಿಸಿತು. ಈ ಹಿನ್ನೆಲೆಯಲ್ಲಿಯೇ ಯಾವ ಅನುಭವವನ್ನೂ ಭಂಗಗೊಳಿಸದೆ ಬದುಕಿನ ಅಭಂಗ
ಅರಿವನ್ನು ಪಡೆಯುವ ಸವಾಲನ್ನು ’ತಂತ್ರ;’ ಸ್ವೀಕರಿಸಿ
ಅದಕ್ಕೆ ಸಜ್ಜುಗೊಂಡಿತು.
’ಸೃಷ್ಟಿ’
ಎಂದರೆ ವಿಸ್ತಾರವಲ್ಲವೆ? ’ತಂತ್ರ’ವೆಂದರೂ ವಿಸ್ತಾರ. ಎರಡೆನ್ನುವುದು ಒಂದರ ವಿಸ್ತಾರ. ಆದುದರಿಂದಲೇ
ಎರಡಿಲ್ಲದೆ ಸೃಷ್ಟಿ ಇಲ್ಲ. ಆ ಎರಡು ಪರಸ್ಪರ ಗಾಢವಾಗಿ ಬೆರೆಯಬಲ್ಲ ಎರಡು. ಬೆರೆಯುವುದಕ್ಕಾಗಿಯೇ ಎರಡಾದಂತಿರುವ ಎರಡು. ಬೆರೆಯುವುದೆಂದರೆ ತಾದಾತ್ಮ್ಯ. ಒಂದು ಇನ್ನೊಂದಾಗಿ
ಪರಿಣಾಮಗೊಳ್ಳುವ ರಸ-ಶಕ್ತಿ! ತಾದಾತ್ಮ್ಯಗೊಳ್ಳದೆ ಸೃಷ್ಟಿಶೀಲತೆ ಇಲ್ಲ. ಸೃಷ್ಟಿಶೀಲತೆ ಇಲ್ಲದೆ
ಸೃಷ್ಟಿಯೇ ಇಲ್ಲ.
ಆದುದರಿಂದಲೇ ಇಲ್ಲಿ, ಉಪಾಸನೆಯಲ್ಲಿ, ನಾವು
ಸಾಧಿಸಬೇಕಾದುದು ಈ ಸೃಷ್ಟಿಶೀಲ ತಾದಾತ್ಮ್ಯವನ್ನೇ. ಸೋಜಿಗವೆಂದರೆ, ಈ
ತಾದಾತ್ಮ್ಯ ಈಗಾಗಲೇ ಇದೆ! ಈ ಸೃಷ್ಟಿ ಇದೆ ಎಂದು ನಂಬುವೆವಾದರೆ, ಈ
ತಾದಾತ್ಮ್ಯವನ್ನು ಅದು ಈಗಾಗಲೇ ಇದೆ ಎಂದು ನಂಬಿದಂತೆಯೇ. ಈ ನಂಬಿಕೆಯನ್ನು ಅನುಭವ
ಮಾಡಿಕೊಳ್ಳುವುದೇ- ’ಭವ’ವನ್ನು ಅಂದರೆ
ಸೃಷ್ಟಿಯನ್ನು ’ಅನು-ಭವ’ ಮಾಡಿಕೊಳ್ಳುವುದೇ-ಅಂದರೆ, ದೇಹ; ಮನಸ್ಸು ಮತ್ತು
ಅಂತಃಕರಣಗಳಲ್ಲಿ ನೇರವಾಗಿ ಅನು-ಭವಿಸುವುದೇ ಉಪಾಸನೆಯ ಗುರಿಯಾಗಿದೆ ಎನ್ನಬಹುದು.
ಕೆಲವು ತಂತ್ರಗಳು ’ಶಿವ’ಪ್ರಧಾನ. ಉದಾ: ಕಾಶ್ಮೀರ ಶೈವ.
ಕೆಲವು ತಂತ್ರಗಳು ‘ಶಕ್ತಿ’ ಪ್ರಧಾನ.ಉದಾ: ಶೌಕ್ತ ಕೌಲ.
ತೋಳ್ಪಾಡಿ ಸೌಂದರ್ಯ ಲಹರಿ<<<<<-papu!