Tuesday, January 13, 2015

Svagata Padya


ಸ್ವಾಗತ ಗೀತೆ

 


ಮಧುರಗಾನ ಮೊರೆಯುತಿಹುದು ಮಂಗಳಶುಭ ಮೂರ್ತಕೆ |

ಸ್ವರದಧಾರೆ ಹೊಮ್ಮುತಿಹುದು ತವ ಶುಭದಾಗಮನಕೆ || ಪ ||

 

ಹರುಷದಿ ನಾ ಹಸಿರ ತೋರಣ, ಇರಿಸಿ ನಿಮ್ಮಾಗಮನಕೆ |

ಘೋಷಗಳಿಪ ಶಾಂತಿ ಮಂತ್ರ ನುಡಿಪೆವು ಶುಭ ಬರುವಿಗೆ,

ನುಡಿಪೆವು ಹರಿ ಒಲುಮೆಗೆ || ೧ ||

 

ಪ್ರೀತಿ ಅದುವೆ ಝೇಂಕರಿಸಲಿ ನಮ್ಮಗಳ ಅನುಬಂಧದಿ |

ಪ್ರೀತಿಯಾಗಿ, ಜ್ಯೋತಿಯಾಗಿ ಕಲಶವಿರಿಸಿ ಅದರಲಿ,

ಶಾಂತಿ ಇಲ್ಲಿ ಬೆಳಗಲಿ || ೨ ||

 

ಮೂಡಣದಿ ಮೂಡುತಿಹ ಬೆಳಕು ಮೂಡಲೀ ಹೊಸ ಬಾಳಲಿ |

ಸಾಧನೆಯ ಸುಸ್ವರವನೇರುವ ಏರಿಸುತ ಮಾರ್ದನಿಸಲಿ,


ಜೀವನಾದವೆ ಮೊಳಗಲಿ || ೩ ||

 

Pashya-papu!

ಈ ಹಾಡನ್ನು ಕೇಳಲು ಇಲ್ಲಿ ಒತ್ತಿ!!!