ಪುರುಷಸೂಕ್ತ ವಿಚಾರವಾಗಿ…..
ಸಾವಿರ ಶಿರಗಳ ಪುರುಷ ! ಸಾವಿರ ಕಣ್-ಗಳು ಕಾಲುಗಳು !!
ಭೂಮಿಯ ಸುತ್ತೂ ಮುತ್ತಿಯು ಮತ್ತೂ, ಹತ್ತಂಗುಲ
ಎತ್ತರದವನು !!!
ವೈದಿಕ ಸಾಹಿತ್ಯದಲ್ಲಿ ಪುರುಷಸೂಕ್ತವು ಅತ್ಯಂತ ಮಹತ್ವದ ಸ್ಥಾನವನ್ನು ಗಳಿಸಿದೆ. ಗಾಯತ್ರೀ ಮಂತ್ರದ ನಂತರ ಸ್ಥಾನ ಪುರುಷಸೂಕ್ತಕ್ಕಿದೆ. ‘ಅ’ಕಾರ, ‘ಉ’ಕಾರ, ‘ಮ’ಕಾರಗಳಿಂದ ಕೂಡಿದ “ಓಂ”ಕಾರದ ವಿಸ್ತಾರವೇ ’ಭೂಃ, ಭುವಃ, ಸ್ವಃ,’ ಎಂಬ ಮೂರು ವ್ಯಾಹೃತಿಗಳು. ಅವುಗಳ ವಿಸ್ತಾರವೇ ತ್ರಿಪಾದಗಳಿಂದ ಕೂಡಿದ ಗಾಯತ್ರೀ. ಗಾಯತ್ರಿಯ ವಿಸ್ತಾರವೇ ಮೂರು ವರ್ಗಗಳುಳ್ಳ ಪುರುಷ ಸೂಕ್ತ. ಪುರುಷಸೂಕ್ತದ ವಿಸ್ತಾರವೇ ಮೂರು ವೇದಗಳು. ಹೀಗೆ ವಿಕಾಸಸರಣಿಯನ್ನು ಹೇಳುತ್ತಾರೆ. ವಿಶೇಷವೆಂದರೆ ಋಗ್ವೇದ,
ಯಜುರ್ವೇದ, ಸಾಮವೇದ, ಅಥರ್ವವೇದ ಈ ನಾಲ್ಕೂ ವೇದಗಳಲ್ಲಿ ಈ ಸೂಕ್ತ ಮಂತ್ರಗಳು ಪಠಿತವಾಗಿವೆ.
ಇದಂ
ಹಿ
ಪೌರುಷಂ
ಸೂಕ್ತಂ
ಸರ್ವವೇದೇಷು
ಪಠ್ಯತೇ
|
ತತಃ
ಶ್ರುತಿಭ್ಯಃ
ಸರ್ವಾಭ್ಯಃ
ಬಲವತ್
ಸಮುದೀರಿತಮ್
||
ಹಾಗಾಗಿ ಈ ಸೂಕ್ತಮಂತ್ರಗಳು ‘ವೇದಮಾರ್ಗ ಗಾಮಿಗಳ
ಮುಕುಟಮಣಿಗಳು’ ಎಂಬಲ್ಲಿ ಅತಿಶಯಯವಿಲ್ಲಾ! ಅಲ್ಲದೇ ಈ ಸೂಕ್ತ, ದೇವನ ವಿರಾಟ್ ರೂಪವನ್ನು
ಕೊಂಡಾಡುವುದರ ಜೊತೆಗೆ ಭಗವತ್ತತ್ತ್ವ ವಿವೇಚನೆಯನ್ನು ಭಾಷೆಯ ಮಿತಿಯಲ್ಲಿ ಅಮಿತವಾಗಿ
ಮಾಡಿಕೊಡುತ್ತದೆ.
ಯಥಾ ಹಿ ಪೌರುಷಂ ಸೂಕ್ತಂ ವಿಷ್ಣೋರೇವಾಭಿಧಾಯಕಮ್ |
ನ ತಥಾ ಸರ್ವವೇದಾಶ್ಚ ವೇದಾಂಗಾನಿ ಚ ಭಾರತ ||
ಆದ್ದರಿಂದ ಇದಕ್ಕೆ ವೇದವೇದಾಂಗಕ್ಕಿಂತ ಹೆಚ್ಚಿನ ಸ್ಥಾನವಿದೆ. ಕೃಷ್ಣಾವತಾರ ಪೂರ್ವದಲ್ಲಿ
ಬ್ರಹ್ಮನು ಭಗವಂತನನ್ನು ಪ್ರಾರ್ಥಿಸಿದ್ದು, ಈ ಪುರುಷಸೂಕ್ತದಿಂದಲೇ. ’ಪುರುಷಂ ಪುರುಷಸೂಕ್ತೇನ ಉಪತಸ್ಥೇ ಸಮಾಹಿತಃ |’ ಎಂದು ಭಾಗವತದಲ್ಲಿ ಹೇಳಿದೆ! “ದೇವ ಜೀವನಾಗಿ ಅವತರಿಸಿದ!
“ ಎನ್ನುವದನ್ನು ಒಪ್ಪುವ ನಮಗೆ ದೇವನ ಇನ್ನೂ ಎರಡು ರೂಪಗಳನ್ನು ಮೊಟ್ಟಮೊದಲು ಪರಿಚಯಿಸಿ
ಕೊಡುತ್ತದೆ, ಈ ಪುರುಷಸೂಕ್ತ.
ಪ್ರಥಮಂ
ತು
ಮಹತ್ಸೃಷ್ಟಂ ದ್ವಿತೀಯಂ ತ್ವಂಡಸಂಸ್ಥಿತಮ್ |
ತೃತೀಯಂ
ದೇಹಿನಾ
ದೇಹೇ
ರೂಪತ್ರಯಮುದಾಹೃತಮ್
||
“ಮಹತ್ತತ್ತ್ವ- ಸೃಷ್ಟಿ ಮಾಡಿದ ರೂಪ.” ಅದು ದೇವನ ಮಹದ್ರೂಪ. “ಬ್ರಹ್ಮಾಂಡದ ಒಟ್ಟೂ ರೂಪ.” ಅದು ದೇವನ ವಿರಾಡ್ರೂಪ. “ಎಲ್ಲದರೊಳಗಿರುವ ರೂಪ.” ಅದು ದೇವನ ಚಿದ್ರೂಪ. ಹೀಗೆ ಈ ಮೂರೂ ರೂಪಗಳನ್ನು ವಿಶದವಾಗಿ ಪ್ರತಿಪಾದಿಸುವ
ಸೂಕ್ತ “ ಪುರುಷಸೂಕ್ತ.”
ಇನ್ನು ಪುರುಷ ಸೂಕ್ತ ಮಂತ್ರಗಳಲ್ಲಿನ “ಪುರುಷ”
ಶಬ್ದವನ್ನು ದೇವನೆಂದು ತಿಳಿದು ಭಕ್ತಿವಿಶೇಷವನ್ನೂ, ಜೀವನೆಂದು ಭಾವಿಸಿ ದಾಸತನವನ್ನೂ, ನಾದವೆಂದು
ಅರಿತು ದಿವ್ಯತೆಯನ್ನೂ, ತತ್ವವೆಂದು ಪ್ರತಿಪಾದಿಸಿ ತತ್ವಜ್ಞಾನವನ್ನೂ, ಶಕ್ತಿಯೆಂದು ಹೇಳಿ
ಭೌತವಿಜ್ಞಾನವನ್ನೂ, ಶರೀರವೆಂದು ಎಣಿಸಿ ಜೀವವಿಜ್ಞಾನವನ್ನೂ ಅರ್ಥಮಾಡಿದ್ದಾರೆ. ಒಟ್ಟಿನಲ್ಲಿ ಈ ಮಂತ್ರಗಳು
ಬಹು-ಆಯಾಮದಿಂದ ಮಾನವನಿಗೆ (ಅರಿವೇ ಗುರಿಯಾದವರಿಗೆ) ಉಪಕಾರಿಯಾಗಿದೆ.
ಇಷ್ಟೇ ಅಲ್ಲದೇ ಈ ಸೂಕ್ತವನ್ನು ಪಠಿಸುವುದರಿಂದಲೂ
ವಿಶೇಷ ಪರಿಣಾಮವಾಗುತ್ತದೆ. ಎಂದು ಶಾಸ್ತ್ರಗಳು ಸಾರುತ್ತವೆ.
ಪ್ರಾಯಶ್ವಿತ್ತೇ
ಜಪೇ
ಚೈವ
ವಿಷ್ಣೋರಾರಾಧನೇ
ತಥಾ
|
ಮೋಕ್ಷೇ
ವಶ್ಯೇsಗ್ನ್ಯುಪಸ್ಥಾನೇ
ಸುಪುತ್ರಪ್ರಾಪಣೇ
ತಥಾ
||
ಸರ್ವಕರ್ಮಪಲಪ್ರಾಪ್ತೌ-ಆರೋಗ್ಯೇ ಮೃತ್ಯುನಾಶನೇ |
ಏತೇಷ್ವರ್ಥೇಷ್ವಿದಂ
ಸೂಕ್ತಂ
ಮುನಯೋ
ವಿನಿಯುಂಜತೇ
||
[ ೧) ಕರ್ಮಲೋಪ, ವಿಧಿಲೋಪ ಉಂಟಾದಾಗ ಮಾಡಬೇಕಾದ ಪ್ರಾಯಶ್ಚಿತ್ತ, ೨) ಜಪ, ೩) ವಿಷ್ಣುವಿನ ಆರಾಧನೆ, ೪) ಮೋಕ್ಷ, ೫)ಜಗತ್ತನ್ನು ವಶದಲ್ಲಿಟ್ಟುಕೊಳ್ಳುವುದು,
೬) ಅಗ್ನಿಯ ಉಪಸ್ಥಾನ, ೭) ಸುಪುತ್ರಪ್ರಾಪ್ತಿ, ೮) ಸರ್ವಾಭೀಷ್ಟಸಿದ್ಧಿ, ೯)ದೇಹಾರೋಗ್ಯ, ೧೦) ಅಕಾಲಮೃತ್ಯುನಿವಾರಣೆ ಈ ಪ್ರಯೋಜನಗಳಿಗಾಗಿ ಪುರುಷಸೂಕ್ತವನ್ನು ಮುನಿಗಳು ವಿನಿಯೋಗಿಸುತ್ತಾರೆ. ]
ಕೊನೆಯದಾಗಿ ಸೂಕ್ತ ಸಂಗತಿಯನ್ನು ಹೀಗೂ
ಹೇಳಬಹುದು……………………!!!!!
ಈ ಸೂಕ್ತದಲ್ಲಿ ’ತಸ್ಮಾದ್ವಿರಾಡಾಜಾಯತ’ ಇತ್ಯಾದಿ ಮಂತ್ರಗಳಿಂದ ಪರಮಪುರುಷನಿಂದಾದ ಬ್ರಹ್ಮಾಂಡಸೃಷ್ಟಿಯನ್ನು
ವರ್ಣಿಸಿದ್ದಾರೆ. ಆ ಪರಮಪುರುಷನು ’ಆಶರೀರಃ ಪ್ರಜ್ಞಾತ್ಮಾ’ ಇತ್ಯಾದಿ ಶ್ರುತಿಗಳಿಂದ ಶರೀರರಹಿತ ಎಂದು ಪ್ರತಿಪಾದಿಸಲ್ಪಟ್ಟಿದ್ದಾನೆ. ಆದ್ದರಿಂದ ಶರೀರವಿಲ್ಲದೇ ಸೃಷ್ಟಿಯನ್ನು ಹೇಗೆ ಮಾಡಿಯಾನು? ಎಂಬ ಸಂಶಯ ಬರುತ್ತದೆ. ಅದರ ಪರಿಹಾರಕ್ಕಾಗಿ ’ಸಹಸ್ರಶೀರ್ಷಾ’ ಇತ್ಯಾದಿಯಾಗಿ ಭಗವಂತನಿಗೆ ಭವ್ಯವಾದ ಶರೀರವಿದೆ, ಎಂದು ಹೇಳಲಾಗಿದೆ. ಆದರೆ ಆ ಶರೀರ ಮಾತ್ರ ಪ್ರಾಕೃತವಲ್ಲ. ಏಕೆಂದರೆ ಅವನು ಪ್ರಕೃತಿಯನ್ನು ಮೀರಿದವನು. ’ ಸ ಭೂಮಿಂ ವಿಶ್ವತೋ ವೃತ್ವಾ ಅತ್ಯತಿಷ್ಠದ್ದಾಶಂಗುಲಮ್’ ಎಂಬುದಾಗಿ ಅವನ ಈ ಮಹಿಮೆಯೂ ವರ್ಣಿತವಾಗಿದೆ.
ಅನಂತರದಲ್ಲಿ
ಬ್ರಹ್ಮಾಂಡ ಸೃಷ್ಟಿಯಾದ ಬಳಿಕ ಅದರಲ್ಲಿ ಜನಿಸಿದ ದೇವತೆಗಳು ಚತುರ್ಮುಖ ಬ್ರಹ್ಮನನ್ನು ಪಶುವನ್ನಾಗಿ ಸಂಕಲ್ಪಿಸಿ, ಮಾನಸಯಜ್ಞದಿಂದ ವಿಷ್ಣುವಿನ ಆರಾಧನೆ ಮಾಡಿದ ಬಗೆಯನ್ನೂ, ಅದರಿಂದ ಪ್ರೀತನಾದ ವಿಷ್ಣುವಿನಿಂದ ಮಾಡಲ್ಪಟ್ಟ ಸಾಧನದ್ರವ್ಯ ಸೃಷ್ಟಿಯನ್ನೂ ವರ್ಣಿಸಿದ್ದಾರೆ. ’ಮುಖಂ ಕಿಮಸ್ಯ’ ಇತ್ಯಾದಿ ಮಂತ್ರಗಳಲ್ಲಿ ಮಾನಸಯಜ್ಞದಲ್ಲಿ ದೇವತೆಗಳು ಭಗವಂತನನ್ನು ಚಿಂತಿಸಿದ ಪ್ರಕಾರವನ್ನೂ ವರ್ಣಿಸಿ, ಕೊನೆಯಲ್ಲಿ ಭಗವದಾರಾಧಕರಾದ ದೇವತೆಗಳಿಗೆ ಮುಕ್ತಿರೂಪಫಲ ದೊರೆತದ್ದನ್ನು ವರ್ಣಿಸಲಾಗಿದೆ.
ಒಟ್ಟಿನಲ್ಲಿ ಪುರುಷಸೂಕ್ತ ಮಂತ್ರಗಳು ಮಾನವನ
ಸರ್ವತೋಮುಖ ಏಳಿಗೆಗೆ ಕಾರಣವಾಗಿವೆ. ಕಾರಣ ಇಂದಿನ ದಿನಗಳಲ್ಲಿ ಈ ಮಂತ್ರಗಳನ್ನು ಪಠಿಸುವ ಪಾಠಕರು
ನಾವಾಗಿದ್ದೇವೆ ಎಂಬುದೇ ನಮಗೆ ಹೆಮ್ಮೆ! ಅಷ್ಟು ಮಾತ್ರಕ್ಕೇ ನಾವು ತೃಪ್ತಿ ಪಡಬಾರದು ತಾನೆ!!!?
ಪೂಜೆಗೈದರು
ಸುರರು ಯಜ್ಞನನು ಯಜ್ಞದಿಂ-
ದವುಗಳಾದವು
ಮೊತ್ತಮೊದಲ ಧರ್ಮಗಳು |
ಮಹಿಮವಂತರು
ಅವರು ಪಡೆದರಿಹ ಮುಕ್ತಿಯನು
ಮೊದಲ
ಸಾಧಕರಾದ ಸುರರು ಇರುವಲ್ಲಿ! ||
ಸಂಗ್ರಹ
ಪರಮೇಶ್ವರ – ಪುಟ್ಟನ್ಮನೆ
poornapathi@gmail.com
No comments:
Post a Comment