”ಶಿಕ್ಷಣ’ ಮಾಹಿತಿಗಳಿಂದ ಕೂಡಿರಬೇಕು...” ಎನ್ನುವುದು ಎಷ್ಟು ಮುಖ್ಯವೋ! ಅದೇ ರೀತಿಯಲ್ಲಿ ಅದು ಮೌಲ್ಯಯುತವಾಗಿಯೂ ಇರಬೇಕು... ! ಎನ್ನುವುದೂ ಕೂಡ ತುಂಬಾ ಮುಖ್ಯವಾದ ಅಂಶವಾಗಿದೆ. ಇವತ್ತಿನ ದಿನಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದಾಗ ಮೌಲ್ಯಯುತ ಶಿಕ್ಷಣದ ಕೊರತೆ ಎದ್ದು ಕಾಣಿಸುತ್ತಿದೆ. ಒಂದು ಕಾಲದಲ್ಲಿ ಎಲ್ಲರೂ (100%) ಶಿಕ್ಷಿತರಾದರೆ ಒಳ್ಳೆಯ ಬೆಳವಣಿಗೆಯಾದಂತೆ ಎಂಬ ನಂಬಿಕೆ ಬಲವಾಗಿ ಇತ್ತು. ಈಗ ಪರಿಸ್ಥಿತಿ ಬಿಗಡಾಯಿಸಿದೆ! ಶಿಕ್ಷಿತರು ಹೆಚ್ಚಿದಂತೆ, ಸಾಮಾಜಿಕ ಮೌಲ್ಯಗಳು ಕುಸಿಯುತ್ತಿವೆ! ಉದಾಹರಣೆಗೆ ಹಿಂದೆ ಅಶಿಕ್ಷಿತರಾದರೂ ಜನ ಮೌಲ್ಯಪ್ರಜ್ಞೆಯನ್ನು ರೂಢಿಸಿಕೊಂಡು ಕರ್ತವ್ಯದಲ್ಲಿ ಮತ್ತು ಮಾನವೀಯತೆಯಲ್ಲಿ ಬದುಕು ಮಾಡಿದರು. ಅದೇ ಇವತ್ತು ಕರ್ತವ್ಯಕ್ಕಿಂತ - ಹಕ್ಕು ಪ್ರತಿಪಾದನೆಯಲ್ಲಿ ಮತ್ತು ಮಾನವೀಯತೆಗಿಂತ – ಕಾಗದಪತ್ರಗಳನ್ನು ಸಂಪಾದಿಸುವಲ್ಲಿ ಜನ ನಿರತರಾಗಿರುವುದು ಎದ್ದುಕಾಣಿಸುತ್ತಿದೆ. ಇದನ್ನು ಗಮನಿಸಿದಾಗ ಮೌಲ್ಯಯುತ ಶಿಕ್ಷಣವೇ ಎಲ್ಲ ಕಾಲಕ್ಕೂ ಪ್ರಸ್ತುತ ಎಂದು ಕಂಡುಬರುತ್ತದೆ.ಒಂದು ದಿನ ಮನೆಯ ಮುಂದಿರುವ ಹಣತೆಯಲ್ಲಿ ಚಿಕ್ಕ ಜಗಳ ಪ್ರಾರಂಭವಾಯಿತು.ಹಣತೆ ” ನನ್ನಿಂದ ದೀಪ ಉರಿಯುತ್ತಿದೆ! ಆ ಬೆಳಕು ನನ್ನದು ” ಎಂದು ಹೇಳಿತು. ಇದನ್ನು ಕೇಳಿದ ಹಣತೆಯಲ್ಲಿದ್ದ ಎಣ್ಣೆ ” ನಾನು ಆ ದೀಪಕ್ಕೆ ಜೀವಾಳ. ನಾನೇ ಇರದಿದ್ದರೆ ದೀಪವೂ ಇಲ್ಲ, ಬೆಳಕೂ ಇಲ್ಲ! ಅದಕ್ಕಾಗಿ ಆ ಬೆಳಕು ನನಗೆ ಸೇರಿದ್ದು...” ಎಂದಿತು. ಅಲ್ಲಿಯೇ ಇದ್ದ ಬತ್ತಿ ” ಊeಟಟo! ನಾನು ಉರಿಯುತ್ತಿರುವದಿಂದಲೇ ದೀಪ ಉರಿಯುತ್ತಿದೆ. ಐogiಛಿಚಿಟಟಥಿ ಬೆಳಕು ನನ್ನದು “ ಎಂದಿತು. ಈ ಕಚ್ಚಾಟವನ್ನು ನೋಡುತಿದ್ದ ಗಾಳಿ ” ನಾನು ಇಲ್ಲದೇ ದೀಪವು ಉರಿಯುವುದಿಲ್ಲ! ಒಂದು ವೇಳೆ ನಾನು ಜೋರಾಗಿ ಬಂದರೆ ದೀಪ ಆರಿಹೋಗುತ್ತದೆ. ಆದ್ದರಿಂದ ಬೆಳಕು ನನ್ನ ನಿಯಂತ್ರಣದಲ್ಲಿದೆ ” ಎಂದು ವಾದಿಸಿತು. ಈ ವಾದ ವಿವಾದಗಳ ಭರಾಟೆಯಲ್ಲಿ ಹಣತೆ ಒಡೆದು ಹೋಯಿತು.ಎಣ್ಣೆ ಹರಿದು ಹೋಯಿತು.ಬತ್ತಿ ಒಂಟಿಯಾಗಿ ಸೊರಗಿ ಹೋಯಿತು.ಗಾಳಿ ಜೋರಾಗಿ ಬೀಸಿ, ಉರಿಯುತ್ತಿದ್ದ ದೀಪ ಆರಿಹೋಯಿತು !ಎಲ್ಲವೂ ಒಟ್ಟಾಗಿ ಇರುತ್ತಿದ್ದರೆ, ಆ ಭರವಸೆಯ ಬೆಳಕು ಮನೆಯಲ್ಲೆಲ್ಲಾ ಪಸರಿಸಿರುತ್ತಿತ್ತು. ” ಅಹಮಿಕೆಯಿಂದ ಅಂಧಕಾರವೆಂಬುದು ಮನೆಯನ್ನು ಹೊಕ್ಕಿತು...ಇಂಥ ಒಂದು ಕಥೆ ಮನುಷ್ಯನ ಕಣ್ಣನ್ನು ಅದೆಷ್ಟು ಬಾರಿ ತೆರಿಸಿದೆಯೋ??? ಅದಕ್ಕೆ ನಾವು ಚಿರ ಋಣಿಗಳು... ಇಂಥ ಕಥೆಗಳು ಜನರ ಒಳ್ಳೆಯ ವರ್ತನೆಗೆ ಮತ್ತು ಮೌಲ್ಯಯುತ ಬದುಕಿಗೆ ತುಂಬಾ ಸಹಕಾರಿಗಳಾಗಿವೆ.ಮಾನವ ಇಂದು ವೈಜ್ಞಾನಿಕವಾಗಿ ಪ್ರಗತಿ ಹೊಂದಿದ್ದರೂ ಸುಖ-ಶಾಂತಿಗಳಿಲ್ಲದೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಈ ನಿಟ್ಟಿನಲ್ಲಿ ಡಾ|| ರಾಧಾಕೃಷ್ಣನ್ ಹೇಳುವಂತೆ “ಮಾನವ ಹಕ್ಕಿಯಂತೆ ಹಾರಾಡುವುದನ್ನು, ಮೀನಿನಂತೆ ಈಜುವುದನ್ನು ಕಲಿತ. ಆದರೆ...! ಮಾನವನಾಗಿ ಬಾಳುವುದನ್ನು ಮಾತ್ರ ಕಲಿಯಲಿಲ್ಲ!” ಅಂದರೆ, ಮಾನವನಾಗಿ ಬಾಳಲು ಇರಬೇಕಾದ ಮಾನವೀಯ ಮೌಲ್ಯಗಳು ಮಕ್ಕಳಲ್ಲಿ ಕ್ಷೀಣಿಸುತ್ತಿರುವುದನ್ನ ಇವತ್ತು ನಾವು ಗಮನಿಸಲೇ ಬೇಕಾಗಿದೆ.ಮಾನವ ಇಂದು ವೈಜ್ಞಾನಿಕವಾಗಿ ಪ್ರಗತಿ ಹೊಂದಿದ್ದರೂ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಕುಟುಂಬ, ಶಾಲೆ ಸ್ನೇಹಿತರು, ಸಮಾಜ, ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದು. ಆದರೆ ಇಂದು ಕುಟುಂಬಗಳು ಅರ್ಥಲೋಲುಪತೆ ಹಾಗೂ ಅತಿಯಾದ ಮಹತ್ವಾಂಕಾಂಕ್ಷೆಗಳಿಂದಾಗಿ ತನ್ನ ನೈಜ ಕರ್ತವ್ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವಲ್ಲಿ ವಿಫಲಗೊಂಡಿವೆ. ಹಾಗಾಗಿ ಈ ಜವಾಬ್ದಾರಿಯನ್ನು ಸಮಾಜದ ಮುಖ್ಯ ಕೇಂದ್ರವಾದ ಶಾಲೆ ಅಥವಾ ಶಿಕ್ಷಣ ಕೇಂದ್ರಗಳು ಪೂರೈಸಬೇಕಾಗಿದೆ. ಅದು ಶಿಕ್ಷಣದ ಪ್ರಧಾನ ಗುರಿಯೂ ಆಗಿದೆಯಲ್ಲವೇ? ಗಾಂಧೀಜಿಯವರು - “ಶೀಲ ಸಂವರ್ಧನೆ, ವ್ಯಕ್ತಿಯಲ್ಲಿ ಸಚ್ಚಾರಿತ್ರ್ಯವನ್ನು ಬೆಳೆಸುವಲ್ಲಿ ಶಿಕ್ಷಣ ಕೇಂದ್ರಗಳು ಯಶಸ್ವಿಯಾದರೆ, ಸಮಾಜವು ತನ್ನಿಂದ ತಾನೇ ಸುಧಾರಿಸುತ್ತದೆ, ಎಂದು ಭಾವಿಸುತ್ತೇನೆ” ಎಂದು ಹೇಳುವುದರ ಮುಖೇನ ಶೈಕ್ಷಣಿಕವಾದ ಮಹತ್ವವನ್ನು ಎತ್ತಿ ಸಾರಿದ್ದಾರೆ.ಶಿಕ್ಷಕನೆಂಬ ಶಿಲ್ಪಿಯ ಗುರಿ ಎಂದರೆ, ವಿದ್ಯಾರ್ಥಿಗಳ ಶರೀರ ಬೆಳೆಸುವುದಲ್ಲ! ಅಥವಾ ಕೇವಲ ಜ್ಞಾನ (ಮಾಹಿತಿಗಳನ್ನು) ತುಂಬುವುದಲ್ಲ! ಬದಲಿಗೆ, ಶುದ್ಧವೂ ಮೌಲ್ಯಯುತವೂ ಆದ ಮನೋಬಲವನ್ನು ರೂಪಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯವನ್ನು ಸಂವರ್ಧಿಸುವುದು. ನೈತಿಕ ಮೌಲ್ಯವು ವಿದ್ಯಾರ್ಥಿಗಳ ಜೀವನದ ರೂಪುರೇಷೆಯನ್ನೇ ಬದಲಿಸುತ್ತದೆ. ಹೀಗಾಗಿಯೇ ಮೌಲ್ಯರಹಿತ ಶಿಕ್ಷಣಕ್ಕೆ ಯಾವುದೇ ಅರ್ಥವಿರುವುದಿಲ್ಲ. ಮೌಲ್ಯವರ್ಧನೆ ಎಂದರೆ, ಮಕ್ಕಳಲ್ಲಿ ನೈತಿಕ ಸದ್ಗುಣಗಳಾದ ಶ್ರದ್ದೆ, ನಿಷ್ಠೆ, ಪ್ರಾಮಾಣಿಕತೆ, ಸಹನೆ, ಅನುಕಂಪ, ಸತ್ಯ, ನ್ಯಾಯ, ಸಚ್ಚಾರಿತ್ರ್ಯ, ಅಹಿಂಸೆ, ಸಹಕಾರ ಇವೇ ಮೊದಲಾದ ಗುಣಗಳ ಜೊತೆಗೆ ರಾಷ್ಟ್ರೀಯತೆ ಮತ್ತು ದೇಶಾಭಿಮಾನವನ್ನೂ ಬೆಳೆಸುವುದಾಗಿದೆ. ಮಕ್ಕಳಲ್ಲಿ ಅಥವಾ ವಿದ್ಯಾರ್ಥಿಗಳಲ್ಲಿ ಈ ಮೌಲ್ಯಗಳನ್ನು ತುಂಬದಿದ್ದರೆ, ತತ್ಪರಿಣಾಮವಾಗಿ ಒತ್ತಡವೇ (ಟೆನ್ಶನ್) ಎಲ್ಲೆಡೆ ಕಾಣುವಂತಾಗುತ್ತದೆ. ಅದರಿಂದ ಒಬ್ಬರು ಮತ್ತೊಬ್ಬರಿಗೆ ಒತ್ತಡವನ್ನು ವರ್ಗಾಯಿಸುತ್ತ ಬದುಕಬೇಕಾಗುತ್ತದೆ. ಮೌಲ್ಯರಹಿತ ಶಿಕ್ಷಣದಿಂದ ಒತ್ತಡಗಳನ್ನು ಒಬ್ಬ ಇನ್ನೊಬ್ಬನಿಗೆ ವರ್ಗಾಯಿಸುವುದನ್ನೇ ಕಾಯಕವಾಗಿಸಿ ಕೊಂಡಿರುವುದು ಸಮಾಜದ ಎಲ್ಲ ಕಡೆಗಳಲ್ಲಿ ಕಾಣುವಂತಾಗಿದೆ. ಇವತ್ತಿನ ಓಡುವ ಜಗತ್ತಿನ ಅರ್ಥದಾತುರದ ಜನರನ್ನೂ, ರೋಗದಿಂದ ಬಳಲಿ ಬೆಂಡಾದ ಒತ್ತಡದ ಬಲಿಪಶುಗಳನ್ನೂ, ಹಕ್ಕಿಗಾಗಿ ಅಥವಾ ತನ್ನ ಸ್ವಾರ್ಥಕ್ಕಾಗಿ ಅಂಡಲೆಯುವ ಮಾನವರಂತಿರುವ ಯಂತ್ರಗಳನ್ನೂ ಎಲ್ಲೆಂದರಲ್ಲಿ ನೋಡುತ್ತಿದ್ದೇವೆ. ಆದ್ದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ನೈತಿಕ ಮೌಲ್ಯವರ್ಧನೆಗೊಳಿಸುವ ಕಾರ್ಯ ಚುರುಕುಗೊಳ್ಳಬೇಕಾಗಿದೆ. ಇತ್ತೀಚೆಗೆ ಶಿಕ್ಷಣ ಸಂಸ್ಥೆಗಳು ಹಣಗಳಿಕೆಯ ಮಿಕಗಳಾಗುತ್ತಿರುವುದು ಪ್ರಜ್ಞಾವಂತ ನಾಗರೀಕರೆಲ್ಲರಿಗೂ ಚಿಂತಾಜನಕ ವಿಷಯವಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ.ಶಿಕ್ಷಣ ನೀಡಿಕೆ ನಿಜಕ್ಕೂ ಪವಿತ್ರ ಕಾರ್ಯ. ನಿಸ್ವಾರ್ಥತೆಯಿಂದ ಶಿಕ್ಷಣ ನೀಡಿದಷ್ಟು ಉತ್ತಮ ಫಲ ದೊರೆಯುತ್ತದೆ. ಶಿಕ್ಷಣವಿಲ್ಲದಿದ್ದರೆ, ನೈತಿಕ ಪ್ರಜ್ಞೆ ಇಲ್ಲದಿದ್ದರೆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಬೆಲೆಯಿಲ್ಲ!. ವ್ಯಕ್ತಿತ್ವವಿಲ್ಲದೆ ಸಮಾಜದಲ್ಲಿ ಮನ್ನಣೆ ಇಲ್ಲ. ಮನ್ನಣೆಗಾಗಿಯಾದರೂ ನೈತಿಕ ಮೌಲ್ಯಗಳ ಜ್ಞಾನಾರ್ಜನೆ ಅತ್ಯಗತ್ಯ. ಮಕ್ಕಳ ಅಥವಾ ವಿದ್ಯಾರ್ಥಿಗಳ ಮನೋಬಲ ಮತ್ತು ಬೌದ್ದಿಕ ವಿಕಾಸಕ್ಕೆ ಕಲಿಕೆ ವರವಾಗಿ ಪರಿಣಮಿಸಬೇಕು ಎಂದಾದರೆ, ಶಿಕ್ಷಣ ಕೇಂದ್ರಗಳು ಮೌಲ್ಯಯುತ ಶಿಕ್ಷಣ ನೀಡುವುದರೆಡೆಗೆ ಹೆಜ್ಜೆ ಹಾಕಲೇಬೇಕು. ಸ್ವಾಮಿ ವಿವೇಕಾನಂದರು “ಈಗಾಗಲೇ ಮಗುವಿನ ಅಂತರಂಗದಲ್ಲಿ ಹುದುಗಿರುವ ಪರಿಪೂರ್ಣತೆಯನ್ನು, ದೈವತ್ವವನ್ನು ಹೊರತರುವುದೇ ಶಿಕ್ಷಣ.” ಎಂದು ಶಿಕ್ಷಣದ ಮಹತ್ವವನ್ನು ವರ್ಣಿಸಿದ್ದಾರೆ. ಈ ಹಾದಿಯಲ್ಲಿ ಶಿಕ್ಷಣ ಸಂಸ್ಥೆಗಳು ಸಾಗಿದರೆ ಸಾಮಾಜಿಕರಲ್ಲಿ ಮೌಲ್ಯವರ್ಧನೆ ಖಂಡಿತ ಸಾಧ್ಯ. ಗೀತೆಯಲ್ಲಿ ಶ್ರೀಕೃಷ್ಣ "ಕ್ಷುದ್ರಂ ಹೃದಯ ದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ" - ಕ್ಷುದ್ರವಾದ ಮನೋದೌರ್ಬಲ್ಯವನ್ನು ಕಿತ್ತೊಗೆದು ಮೇಲೆದ್ದು ನಿಲ್ಲು...! ಎಂದು ಅರ್ಜುನನನ್ನು ಉತ್ತೇಜಿಸುತ್ತಾನೆ. ಅದರಂತೆ ಈ ಮಹತ್ಕಾರ್ಯಕ್ಕೆ ನಾವೆಲ್ಲ ಕಟಿಬದ್ಧರಾಗಿ ನಿಲ್ಲೋಣ! ಆಗುತ್ತದೋ? ಇಲ್ಲವೋ? ಎಂಬ ಹೊಯ್ದಾಟವನ್ನು ದೂರಮಾಡಿ, ನಿಶ್ಚಯ ಬುದ್ಧಿಯನ್ನು ಗಳಿಸೋಣ. ಮಾಹಿತಿ ಪ್ರಪಂಚದಿಂದ ಮೌಲ್ಯಯುತ ಪ್ರಪಂಚವನ್ನು ನಮ್ಮ ಮುಂದಿನ ಪ್ರಜೆಗಳಿಗೆ (ತಲೆಮಾರಿನ ಜನರಿಗೆ) ಪರಿಚಯಿಸೋಣ...
Experience is the hardest kind of teacher it gives you the test first and the lesson afterward...anonymous!
Thursday, December 29, 2022
ಮೌಲ್ಯ ಶಿಕ್ಷಣದ ಪ್ರಸ್ತುತತೆ...!
Saturday, October 15, 2022
ದೇವಮಾನವ!
Wednesday, August 17, 2022
ನವಭಾರತನಿರ್ಮಾಣೇ ಯುವಕಾನಾಂ ಪಾತ್ರತಾ
ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ವಯ್ಯುಪಪದ್ಯತೇ |
ಕ್ಷುದ್ರಂ ಹೃದಯದೌರ್ಬಲ್ಯಂ "ತ್ಯಕ್ತ್ವೋತ್ತಿಷ್ಠ ಪರಂ ತಪ" ||
ಆದೌ ಗೀತಾಚಾರ್ಯೇಣ ಶ್ರೀಕೃಷ್ಣೇನ ಶ್ರೀಮದ್ಭಗವದ್ಗೀತಾಯಾಂ ಯದುಕ್ತಂ ತತ್ಸ್ಮರಾಮಿ |
ಅಸ್ಮಾಕಂ ಭಾರತದೇಶಸ್ಯ ಪುನರುತ್ಥಾನಂ ಕೇವಲೇನ ಉಪರಿತನ ಶ್ಲೋಕೇನೈವ ಸಿದ್ಧ್ಯತಿ | ಕಿಂ ಬಹುನಾ "ತ್ಯಕ್ತ್ವೋತ್ತಿಷ್ಠ ಪರಂ ತಪ" ಇತ್ಯೇಭಿಃ ಚತುರ್ಭಿಃ ಪದೈರಪಿ ರಾಷ್ಟ್ರೋತ್ಥಾನಂ ಭವಿತುಮರ್ಹತಿ | ಇತಿ ಸ್ವಾಮೀ ವಿವೇಕಾನಂದಃ ವದತಿ ಸ್ಮ | ಅದ್ಯ ಭಾರತರಾಷ್ಟ್ರಸ್ಯ ಪುನರುತ್ಥಾನಂ ಅಥವಾ ನವಭಾರತನಿರ್ಮಾಣಂ ಆವಶ್ಯಕಂ ವಾ? ಯದಿ ಆವಶ್ಯಕಂ, ತರ್ಹಿ ತತ್ರ ಕೇ ಮುಖ್ಯಂ ಪಾತ್ರಂ ವಹಂತಿ? ಇತಿ ವಿವೇಚಯಾಮಃ ||
ಶಾಸ್ತ್ರೇತಿಹಾಸ-ಪುರಾಣ-ಕಾವ್ಯಾದಿಭ್ಯೋ ಅತೀತಸ್ಯ ಭಾರತಸ್ಯ ತದುತ್ಥಾನಮವಲೋಕ್ಯ, ಅದ್ಯತನಸ್ಯ ಚ ಭಾರತಸ್ಯ ಏತಾದೃಶಂ ಶೋಚನೀಯಂ ಪತನಂ ಚ ವೀಕ್ಷ್ಯ, ಕ ಈದೃಗ್ಭಾರತೀಯೋ ಯೋ ನಾತಿತರಾಂ ದೂಯತೇ? ಅದ್ಯ ತು ಅಸ್ಯಾಂ ವಸಿಷ್ಠ-ಜನಕ-ರಾಮ-ಕೃಷ್ಣಾರ್ಜುನಾದೀನಾಂ ಪವಿತ್ರಾಯಾಂ ಭರತವಸುಧಾಯಾಂ ದಾರಾಃ ಅಪಹ್ರಿಯಂತೇ, ಮರ್ಯಾದಾಃ ನಿಪಾತ್ಯಂತೇ, ಆಚಾರಾಃ ವಿಲೋಪ್ಯಂತೇ! ಸಂಪ್ರತಿ ತು ಅಸ್ಮಿನ್ ದೇಶೇ ನಗರೇ ನಗರೇ ಗ್ರಾಮೇ ಗ್ರಾಮೇ ಗೇಹೇ ಗೇಹೇ ಚ ಪ್ರವಂಚನಪಟವೋ ದುರಾಚರಣಪ್ರಿಯಾ ಏವ ಪುರುಷಾಃ ಪ್ರಾಪ್ಯಂತೇ!
ಯದ್ಯಪಿ ಭಾರತಂ ತದೇವ ವರ್ತತೇ ; ಸ ಏವ ಹಿಮಾಲಯ ಇಹ ತಿಷ್ಠತಿ ; ಸೈವ ಗಂಗಾತ್ರ ಪ್ರವಹತಿ ; ಸೈವ ಭೂಮಿರಿಹ ವಿದ್ಯತೇ ; ಪರಂ ನ ಮಾನವೇಷು ನ ಮಾನವತಾ, ನ ಮಹಿಲಾಸು ಸಂಸ್ಕೃತ್ಯಾಂ ನಿಷ್ಠಾ, ನ ಬಂಧುಷು ಬಂಧುತ್ವಂ, ನ ಮಿತ್ರೇಷು ಮಿತ್ರತ್ವಂ, ನ ಧನವತ್ಸು ದೀನ-ದರಿದ್ರಭರಣಭಾವಃ, ನ ಶಾಸನಕಾರಿಷು ಜನವಾತ್ಸಲ್ಯಂ ಪ್ರಾಯೇಣ ಸಂಲಕ್ಷ್ಯತೇ !
ಯದಾ ಪ್ರಭೃತ್ಯೇವ ಜಗದಂಬಾನುಕಂಪಯಾ ಭಾರತೇನ ಸ್ವಾತಂತ್ರ್ಯಂ ಸಮವಾಪ್ತಂ ತದಾ ಪ್ರಭೃತ್ಯೇವ ದೇಶಮಪಕರ್ತುಂ ಸಹಸ್ರೇಭ್ಯೋಪ್ಯಧಿಕಾಃ ಸ್ವಾರ್ಥಭಾವಾಃ ಯುಗಪದೇವ ಭಾರತ-ಧರಾಂ ಆವೃಣ್ವಂತೋ ದೃಗ್ಗೋಚರೀ ಭವಂತಿ | ಅತಃ ಸಿದ್ಧಂ "ಅಸ್ಯ ಭಾರತರಾಷ್ಟ್ರಸ್ಯ ಪುನರುತ್ಥಾನಂ ಅಥವಾ ನವಭಾರತನಿರ್ಮಾಣಂ ಆವಶ್ಯಕಂ" ಇತಿ | ತರ್ಹಿ ತತ್ರ ಕೇ ಮುಖ್ಯಂ ಪಾತ್ರಂ ವಹಂತಿ? ಇತಿ ಚೇತ್ 'ಸರ್ವೇಪಿ ಭಾರತೀಯಾಃ' ಇತಿ ಪ್ರಥಮತಯಾ ವದಾಮಃ | ಪರಮತ್ರ ದುರ್ಬಲ ಹೃದಯಾಃ ಬಾಲಾಃ, ಜರಾ-ವ್ಯಾಧಿಗ್ರಸ್ತಾಃ ಪುರುಷಾಶ್ಚ ವಿಚಾರಯಂತಿ ಬಹುತರಂ; ನಾಚರಂತಿ ಕಿಂಚನ! ತೇಷಾಂ ಪ್ರಕೃತಿರೇವ ಈದೃಶೀ ಭವತಿ! ಅಸ್ತು ನಾಮ! ಪರಂ, "ಯೇ ಚ ಭಾರತೀಯಾಃ ಯಶಸಾ ವಯಸಾ ಕೀರ್ತ್ಯಾ ಚ ಸಮೇತಾಃ ತೇ ಅತ್ರ ನವಭಾರತನಿರ್ಮಾಣೇ ಸಮರ್ಥಾಃ ಭವಂತಿ | ಯೇ ಚ ಮನಸ್ವಿನಃ ಸತ್ವಯುತಾಃ ಸೋತ್ಸಾಹಂ ಸನ್ನದ್ಧಾಃ ಸಾಹಸಸ್ಯಾಗ್ರೇ ಗಚ್ಚಂತಿ | ತ ಏವ ಯುವಕಾಃ ಅತ್ರ ನವಭಾರತನಿರ್ಮಾಣೇ ಪ್ರಮುಖಂ ಪಾತ್ರಂ ವಹಂತಿ" ಇತಿ ನಿಶ್ಚಪ್ರಚಮ್ ||
ಇದಾನೀಂ ಯುವಕಾಃ ಬಹುಷು ಕ್ಷೇತ್ರೇಷು ಕೃತಭೂರಿಪರಿಶ್ರಮಾಃ ವಿಜ್ಞಾನೇ ತಥಾ ನೈಕ-ತಾಂತ್ರಿಕವಿಷಯೇ ಗತಕೌಶಲಾಃ ದರೀದೃಶ್ಯಂತೇ | ತೇ ಇತೋಪ್ಯತಿಶಯೇನ ಪ್ರೋತ್ಸಾಹಮರ್ಹಂತಿ ಚ | ಸಂಪ್ರತಿ ಭಾರತಸ್ಯ ಕೃತೇ ಸಚ್ಚರಿತ್ರಾಣಾಂ ವಿಶಾಲಹೃದಯಾನಾಂ ಉಚ್ಚವಿಚಾರವಿಭೂಷಿತಾನಾಂ ತರುಣಾನಾಮಪೇಕ್ಷಾ ವರ್ತತೇ | ಯೇನ ಪುನಃ ಸರ್ವಮಪಿ ಸುಖೇನ ಶಾಂತ್ಯಾ ಚ ಶ್ವಾಸಮಾದಾತುಂ ಶಕ್ನುಯಾತ್ | ಭಾರತೀಯತಾ ಪುನರಪಿ ಜಾಗೃಯಾತ್ ; ಭೂಯಶ್ಚ ಭಾರತಂ ಸ್ವೀಯಮತೀತಂ ಮಹಿಮಾನಂ ಗರಿಮಾಣಂ ಚ ಸಮವಾಪ್ನುಯಾತ್ || ಅತಃ ಯಶಸಾ ವಯಸಾ ಕೀರ್ತ್ಯಾ ಸಮೇತಾನ್ ಭಾರತೀಯಯುವಕಾನ್ "ತ್ಯಕ್ತ್ವೋತ್ತಿಷ್ಠ ಪರಂ ತಪ" ಇತಿ ಪುನರುದ್ಬೋಧ್ಯ, ಸಂಸ್ತೂಯತೇ ಮಯಾ ||
ಸರ್ವೇಪಿ ಸುಖಿನಃ ಸಂತು ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿದ್ದುಃಖಭಾಗ್ಭವೇತ್ ||
ಅಥವಾ
ಯಾ ಮೇ ಮಾತಾ ಸಕಲಸುಖದಂ ರಾಮರಾಜ್ಯಂ ಹ್ಯಭುಂಕ್ತ |
ಯಾ ಮೇ ಮಾತಾ ಸುಕೃತಸುಭಗಂ ಧರ್ಮರಾಜ್ಯಂ ದದರ್ಶ ||
ಯಾ ಮೇ ಮಾತಾ ಹ್ಯಧಿಗತವತೀ ಸತ್ಯನೀತ್ಯಾ ಸ್ವರಾಜ್ಯಂ |
ಸಾ ಭೂಯಾನ್ಮೇ ವಿಮಲಚರಿತಾ ಜನ್ಮಭೂಮಿರ್ಜಗತ್ಯಾಮ್ ||
ಇತಿ ಶಮ್ ||