ಶ್ರೀರಾಮನ ವ್ಯಕ್ತಿತ್ವ, ಯುಗಯುಗಗಳೇ ಕಳೆದರೂ ಯಾರೂ ತಲುಪಲಾರದ ಎತ್ತರವನ್ನು ಹೇಗೆ ತಲುಪಿವೆ? ಎಂಬುದನ್ನು ಕವಿ ಸುಂದರವಾಗಿ ಸೂಕ್ಷ್ಮವಾಗಿ ಸೂಚಿಸಿದ್ದಾನೆ. ೧) ಬಾಲ್ಯದ ಹುಡುಗಾಟಿಕೆ - ಶಿವ ಧನುಸ್ಸನ್ನು ಮುರಿಯುವವರೆಗೆ... ೨) ಪ್ರೌಢಿಮೆ (ಪ್ರಾಯ ಸಂದರ್ಭ) - ತಂದೆಯ ಮಾತಿಗೆ ರಾಜ್ಯ ಬಿಟ್ಟು, ಕಾಡಿಗೆ ಹೋಗುವವರೆಗೆ... ೩) ಸ್ನೇಹ (ದಯೆ) - ಸುಗ್ರೀವನ ಸಖ್ಯ ಸಂಪಾದಿಸುವವರೆಗೆ... ೪) ಆಜ್ಞೆ (ಕೆಲಸವನ್ನು ಪೂರೈಸಬೇಕೆಂಬ ಹಟ (ಛಲ)) - ಸಮುದ್ರಕ್ಕೆ ಸೇತುವೆ ಕಟ್ಟುವವರೆಗೆ... ೫) ಯಶಸ್ಸು (ಕೀರ್ತಿ) - ಲಂಕಾಧಿಪತಿಯಾದ ದಶಕಂಠನ ಸೆದೆಬಡಿಯುವವರೆಗೆ... ೬) ಜನಾನುರಾಗ (ಪ್ರಜಾ ಪ್ರೇಮ) - ಮಡದಿ ಜಾನಕಿಯನ್ನು ಕಾಡಿಗೆ ಬಿಡುವವರೆಗೆ... ಹೀಗೆ ಹಲವು ಹತ್ತು ವಿಷಯಗಳಲ್ಲಿ ಆಕಾಶದಷ್ಟು ಎತ್ತರಕ್ಕೆ ತಲುಪಿದ ಶ್ರೀರಾಮನ ಆದರ್ಶಗುಣಗಳು ನಮ್ಮನ್ನು ಕಾಪಾಡಲಿ.
ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪನೆಯಾದ ಮೊದಲವರ್ಷದ ಸವಿನೆನಪಿಗೆ ಈ ನುಡಿನಮನಗಳು. ವಂದನೆಗಳೊಂದಿಗೆ ಪರಮೇಶ್ವರ ಪುಟ್ಟನಮನೆ
No comments:
Post a Comment