ಪರಾಶರರ
ವಿಚಾರವನ್ನು ತಳ್ಳಿಹಾಕಿದ್ದಾರಾ!? ಯದ್ಯಪಿ ಕಲಿ
ಧರ್ಮವನ್ನೇ ಹೇಳಲು ಉಪಕ್ರಮಿಸಿದ ಪರಾಶರರ ಮಾತನ್ನು ಈ ಸಂಪ್ರದಾಯವಾದಿಗಳು ಗೌರವದಿಂದ ಹೇಗೆ
ಅಲ್ಲಗಳೆದಿದ್ದಾರೆ? ಎಂಬುದನ್ನು
ಗಮನಿಸಿದರೆ, ಪರಾಶರರ ವಿಚಾರಕ್ಕೆ
ಹಿಂದಿನ ಜನರೇ ಅನ್ಯಾಯವನ್ನು ಮಾಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.
ನಷ್ಟೇ ಮೃತೇ
ಪ್ರವ್ರಜಿತೇ
ಕ್ಲೀಬೇ ಚ ಪತಿತೇ
ಪತೌ |
ಪಂಚಸ್ವಾಪತ್ಸು
ನಾರೀಣಾಂ
ಪತಿರನ್ಯೋ ವಿಧೀಯತೇ
||
ಆಪತ್ತಿನ
ಸಂದರ್ಭದಲ್ಲಿ ಮಹಿಳೆಗಾದ ಅನ್ಯಾಯವನ್ನು ಸರಿಪಡಿಸುವ ಮಹತ್ತರ ಹೆಜ್ಜೆಯನ್ನಿಟ್ಟ, ದಿಟ್ಟ ಮತ್ತು ಕರುಣಾಳುಗಳಾದ ಪರಾಶರರು ಈ ಐದು
ಸಂದರ್ಭಗಳಲ್ಲಿ ಸ್ತ್ರೀಯರಿಗೆ ಪುನರ್ವಿವಾಹವನ್ನು ಪ್ರತಿಪ್ರಸವ ಮಾಡಿರುತ್ತಾರೆ. ಇಂಥ
ಸಂದರ್ಭದಲ್ಲಿ ಪುನರ್ವಿವಾಹ ದೋಷವಲ್ಲ! ಎಂಬುದಷ್ಟೇ ಅವರ ವಿಚಾರವಾಗಿದೆ. ಹೊರತು... ಪುನರ್ವಿವಾಹ
ಅನಿವಾರ್ಯ ಎಂಬುದಾಗಲೀ, ಅದು ಕಲಿಧರ್ಮ
ಎಂಬುದಾಗಲೀ ಅವರ ತಾತ್ಪರ್ಯ ಅಲ್ಲ! ಹೀಗಿರುವಾಗ ಇದನ್ನು ಯುಗಾಂತರ ವಿಷಯ ಎಂದು ತಳ್ಳಿಹಾಕಲು
ಕಾರಣವೇನು? ಅಲ್ಲದೇ ಇದನ್ನು
ಸಪ್ತಪದ ಕ್ರಮಣಕ್ಕೆ ಮುಂಚಿತವಾಗಿ ಅನುಸರಿಸಬೇಕಾದ್ದು, ತದನಂತರದಲ್ಲಿ ಈ ಮಾತಿಗೆ ಅರ್ಥವಿಲ್ಲ! ಎಂದು ಹೇಳಿ
ಸೀಮಿತ ವ್ಯವಸ್ಥೆಗೆ ಅಣಿಗೊಳಿಸಲು ಕಾರಣವೇನು? ಎಂಬುದು ಅರ್ಥವಾಗುತ್ತಿಲ್ಲ! ಹಾಗಂತ ಧರ್ಮಶಾಸ್ತ್ರ ನಿಬಂಧಕಾರರೂ ಕೂಡ ಸಂಪ್ರದಾಯ
ಪ್ರವರ್ತಕರೂ, ಜನಾನುರಾಗಿಗಳೂ,
ಧರ್ಮ ಮಾರ್ಗ ಪೋಷಕರೂ,
ಕರುಣಾಳುಗಳೂ ಆಗಿದ್ದಾರೆ.
ಹೀಗಿರುವಾಗ ಋಷಿವಚನಕ್ಕೂ ಋಷಿಸದೃಶರ (ಸಂಪ್ರದಾಯ ವಾದಿಗಳ, ನಿಬಂಧ ಕಾರರ) ವಚನಕ್ಕೂ ವಿರೋಧ ಬಂದಾಗ ಯಾವುದು
ಗ್ರಾಹ್ಯ? ಎಂಬುದನ್ನು ಪ್ರಸ್ತುತ ನಾವು ವಿಮರ್ಶಿಸಬೇಕಾಗಿದೆ...
No comments:
Post a Comment