Sunday, September 13, 2015

Sir M. Vishveshwarayya



ಸರ್, ಎಂ. ವಿಶ್ವೇಶ್ವರಯ್ಯ

ಮಾನ್ಯರೇ ಮತ್ತು ಸಭ್ಯರೇ,

ಜೀವನ ಬಿಸಿ ಚಹಾ ಇದ್ದಂತೆ! ಅದನ್ನು ಕುಡಿದರೆ ಕುಡಿದು ಬರಿದಾಗುತ್ತದೆ, ಇಟ್ಟರೆ ಅದು ತಣಿದು ಹಾಳಾಗುತ್ತದೆ. ಹೀಗಿರುವಾಗ ನಾವು ಈ ಜೀವನ ಗತಿಯಲ್ಲಿ ಅನುಸರಿಸ ಬೇಕಾದದ್ದು ಯಾವುದು? ಎಂದು ಕೊಂಡರೆ, ನಮ್ಮ ಮುಂದಿನ ಜನರಿಗೆ ಹಿತವಾದದ್ದನ್ನು ನಾವು ಮಾಡಬೇಕು! ಎಂಬುದು ಸ್ಪಷ್ಟವಾಗುತ್ತದೆ. ಹೀಗೆ ಜನಹಿತವನ್ನು ಮಾಡಿದವರಲ್ಲಿ ಪ್ರಮುಖರೂ ಪ್ರಾತಃಸ್ಮರಣೀಯರೂ ಆದ ಸರ್, ಎಂ. ವಿಶ್ವೇಶ್ವರಯ್ಯನವರ ಕುರಿತು ನನ್ನೆರಡು ಮಾತುಗಳು.

ವಿಶ್ವೇಶ್ವರಯ್ಯನವರು 1860ರ ಸೆಪ್ಟಂಬರ್ ತಿಂಗಳ 15ರಂದು ಆಗಿನ ಮೈಸೂರು ಸಂಸ್ಥಾನದ ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ತಂದೆ ಶ್ರೀನಿವಾಸ ಶಾಸ್ತ್ರಿ ಮತ್ತು ಶ್ರೀಮತಿ ವೆಂಕಟಲಕ್ಷ್ಮಮ್ಮರ ಪುತ್ರರಾಗಿ ಜನಿಸಿದರು. ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಮುದ್ದೇನಹಳ್ಳಿಯಲ್ಲೇ ನಡೆಯಿತು. ತಂದೆ ಶ್ರೀನಿವಾಸಶಾಸ್ತ್ರಿಗಳು ತೀರ್ಥಯಾತ್ರೆಯ ನಿಮಿತ್ತ ರಾಯಚೂರಿನಿಂದ ಹಿಂದಿರುಗುವಾಗ ಮಾರ್ಗಮಧ್ಯೆ ಸ್ವರ್ಗಸ್ಥರಾದರು. ಆಗ ವಿಶ್ವೇಶ್ವರಯ್ಯನವರ ವಯಸ್ಸು ಕೇವಲ 15 ವರ್ಷ. ತಂದೆಯ ಮರಣದ ನಂತರ ಸೋದರಮಾವ ರಾಮಯ್ಯನವರು ವಿಶ್ವೇಶ್ವರಯ್ಯನವರನ್ನು ಬೆಂಗಳೂರಿಗೆ ಕರೆಯಿಸಿ, (1875 ರಲ್ಲಿ) ವೆಸ್ಲಿಯನ್ ಮಿಷನ್ ಪ್ರೌಡಶಾಲೆಗೆ ಸೇರಿಸಿದರು. ಹೈಸ್ಕೂಲು ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಶಿಕ್ಷಣವನ್ನು ಮುಂದುವರೆಸಿದರು. ತಮ್ಮ ಹದಿನಾರನೆಯ ವಯಸ್ಸಿನಲ್ಲಿ ಮೆಟ್ರಿಕ್ ಪರಿಕ್ಷೆ ಕಟ್ಟಲೂ ಅವರ ಬಳಿ ಹಣ ಇರಲಿಲ್ಲ. ತಾಯಿಯ ಬಳಿಯೂ ಹಣವಿರಲಿಲ್ಲ, ಮನೆಯಲ್ಲಿದ್ದ ಪಾತ್ರೆಗಳನ್ನು ಅಡವಿಟ್ಟು ಮಗನಿಗೆ 12ರೂ ಗಳನ್ನು ಕೊಟ್ಟು ಕಳುಹಿಸಿದಳು ತಾಯಿ ವೆಂಕಟಲಕ್ಷ್ಮಮ್ಮ. ಹೀಗೆ ಹಣಹೊಂದಿಸುತ್ತಾ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದರು.

ಗಣಿತ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದಿದ್ದ ವಿಶ್ವೇಶ್ವರಯ್ಯನವರು 1881ರಲ್ಲಿ ಬಿ. ಎ. ಪರೀಕ್ಷೆಯಲ್ಲಿ ಉನ್ನತ ಶ್ರೇಣೀಯಲ್ಲಿ ತೇರ್ಗಡೆಯಾದರು. ಉನ್ನತವ್ಯಾಸಂಗಕ್ಕಾಗಿ ಮೈಸೂರು ಸರ್ಕಾರ ನೀಡುವ ವಿದ್ಯಾರ್ಥಿ ವೇತನ ಪಡೆದು ಇಂಜಿನಿಯರಿಂಗ್ ಶಿಕ್ಷಣಕ್ಕಾಗಿ ವಿಶ್ವೇಶ್ವರಯ್ಯನವರು ಪುಣೆಗೆ ತೆರಳಿದರು. ಕೇವಲ ತಮ್ಮ 23 ನೆ ವಯಸ್ಸಿನಲ್ಲಿ L.C.E ಮತ್ತು E.C.E.L ಪರೀಕ್ಷೆಯಲ್ಲಿ ಇಡೀ ಬೊಂಬಾಯಿ ಪ್ರಾಂತ್ಯಕ್ಕೆ ಮೊದಲ ಶ್ರೇಣೀಯಲ್ಲಿ ಪ್ರಥಮ ಸ್ಥಾನಗಳಿಸಿ ಪಾಸಾದರು. ಇದು ಈಗಿನ ಬಿ. ಇ. ಡಿಗ್ರಿಗೆ ಸಮ. ನಂತರ ಬೊಂಬಾಯಿ ಪ್ರಾಂತ್ಯದಲ್ಲಿ ಸಹಾಯಕ ಇಂಜಿನಿಯರ್ ಅಧಿಕಾರಿಯಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿ, ಸತತ 24 ವರ್ಷಗಳಷ್ಟು ಕಾಲ ಇಂಜಿನಿಯರಿಂಗ್ ವಿಭಾಗದ ಎಲ್ಲ ಉನ್ನತ ಹುದ್ದೆಗಳಿಗೂ, ತಮ್ಮ ಸಾಮರ್ಥ್ಯ ಮತ್ತು ದಕ್ಷತೆಗಳಿಂದ ಮೇಲೇರಿದರು.
ಇವರ ಸಾಮರ್ಥ್ಯ, ಬುದ್ಧಿವಂತಿಕೆ, ಕಾಲಕ್ಷಮತೆ, ಪ್ರಾಮಾಣಿಕತೆ ಇವುಗಳನ್ನ ಗಮನಿಸಿ ಸರ್ಕಾರ 18 ಆಂಗ್ಲ ಅಧಿಕಾರಿಗಳ ಮೇಲೆ ಭಡ್ತಿ ನೀಡಿತು. ಆಗಿನ ಕಾಲದಲ್ಲಿ ಚೀಫ್ ಇಂಜಿನಿಯರ್ ಸ್ಥಾನ ಆಂಗ್ಲರಿಗೆ ಮೀಸಲಾಗಿತ್ತು. ನ್ಯಾಯ ಸಮ್ಮತವಾಗಿ ತಮಗೆ ಸಿಗಬೇಕಿದ್ದ ಸ್ಥಾನ ಸಿಗಲಿಲ್ಲ ಅದಕ್ಕಾಗಿ ಆ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದರು. ಅದನ್ನು ಹಿಂತೆಗೆದುಕೊಳ್ಳುವಂತೆ ಗೌರ್ವನರ್ ಮನವಿ ಮಾಡಿಕೊಂಡರೂ ವಿಶ್ವೇಶ್ವರಯ್ಯನವರು "ಭಾರತೀಯರ ಸಾಮರ್ಥ್ಯ ಕಡೆಗಣಿಸುವ ದುರಭಿಮಾನಕ್ಕೆ ತಲೆಬಾಗಲಾಗದು" ಎಂದು ತಮ್ಮ ನಿಲುವನ್ನು ಸಡಿಲಿಸದೆ 1908ನೆ ಮೇ ತಿಂಗಳಲ್ಲಿ ಬೊಂಬಾಯಿ ಸರ್ಕಾರದ ಕೆಲಸದಿಂದ ನಿವೃತ್ತಿ ಹೊಂದಿ, ಲಂಡನ್ ಪ್ರವಾಸ ಕೈಗೊಂಡರು. ಅಲ್ಲಿ ಅನೇಕ ಕಾರ್ಖಾನೆಗಳಿಗೆ ಭೇಟಿ ನೀಡಿ ನಮ್ಮ ದೇಶಕ್ಕೆ ಬೇಕಾಗುವ ಎಲ್ಲ ತಂತ್ರಜ್ಞಾನ, ಮಾಹಿತಿಯನ್ನು ಪಡೆದುಕೊಂಡರು. ಅಲ್ಲಿಂದ ಬಂದ ಮೇಲೆ ಮೈಸೂರಿನಲ್ಲಿ ಅನೇಕ ಕೆರೆಕಟ್ಟೆ , ಕಾಲುವೆ, ಜಲಾಶಯದ ಯೋಜನೆಗಳನ್ನು ಅಚ್ಚುಕಟ್ಟಾಗಿ ಕಟ್ಟಿದರು. ಅವರ ಈ ಕೆಲಸಗಳಿಂದ ಸಂತೃಪ್ತರಾದ ಮಹಾರಾಜರು ಅವರನ್ನು ದಿವಾನರನ್ನಾಗಿ ನೇಮಿಸಿದರು. ಆನಂತರ ಇವರು ಕಡ್ಡಾಯ ಪ್ರಾಥಮಿಕ ಶಿಕ್ಷಣ ಜಾರಿಗೆ ತಂದರು.  ಅಸ್ಪೃಶ್ಯರ ಮತ್ತು ಹಿಂದುಳಿದವರ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ನೀಡುವ ವ್ಯವಸ್ಥೆಯನ್ನು ಮಾಡಿದರು.  ಸ್ತ್ರೀ ಶಿಕ್ಷಣಕ್ಕೆ ಗಮನ ಹರಿಸಿದರು. ಭದ್ರಾವತಿ ಕಬ್ಬಿಣ ಕಾರ್ಖಾನೆಯ ಸ್ಥಾಪನೆ, ಕನ್ನಂಬಾಡಿ ಅಣೆಕಟ್ಟೆಯ ಸ್ಥಾಪನೆ,  ಕೋಲಾರದ ಚಿನ್ನದ ಗಣಿಗೆ ಮೊಟ್ಟ ಮೊದಲಬಾರಿಗೆ ವಿದ್ಯುತ್ ಪೂರೈಕೆ, ಗಂಧದ ಎಣ್ಣೆ ಕಾರ್ಖಾನೆ ಮತ್ತು ಸಾಬೂನು ಕಾರ್ಖಾನೆಯ ಸ್ಥಾಪನೆಗಳೇ ಮೊದಲಾದ ಅಭಿವೃದ್ಧಿಪರ ಯೋಜನೆಗಳನ್ನು ರೂಪಿಸಿ, ಸಕ್ರಿಯವಾಗಿ ಅವುಗಳನ್ನು ಪೂರೈಸಿದರು.  

ಇಷ್ಟೆಲ್ಲ ಕೆಲಸಗಳನ್ನು ಮಾಡಿ, 102 ವರ್ಷಗಳ ಕಾಲ ಸ್ವಚ್ಚ ಸುಂದರ ಬದುಕನ್ನು ನಡೆಸಿದ ಅದ್ವೀತಿಯ, ಅಪ್ರತಿಮ, ದೇಶಭಕ್ತ, ಚತುರ ಇಂಜಿನಿಯರ್, ದಕ್ಷ ಆಡಳಿತಗಾರ, ಪ್ರಾಮಾಣಿಕ, ಸಹೃದಯಿ, ದಯಾಮಯಿ ಅವರ 155ನೆಯ ಹುಟ್ಟು ಹಬ್ಬದ ಸಂದರ್ಭದಲ್ಲಿ ಮಾತಿನಿಂದ ವಂದಿಸುತ್ತಾ. “ನಾವು ಇಂದು ಪಡೆದಿರುವ ಸೌಲಭ್ಯ, ಸೌಕರ್ಯ, ಶಿಕ್ಷಣ, ಪರಿಣತಿ, ಅಭಿವೃದ್ಧಿ - ನಮ್ಮ ಹಿಂದಿನ ಅನೇಕರ ತ್ಯಾಗ, ಬಲಿದಾನ, ಕಾಳಜಿ, ಮತ್ತು ಶ್ರಮದ ತಳಹದಿಯನ್ನು ಅವಲಂಬಿಸಿದೆ.” ಎಂಬುದನ್ನು ಮರೆಯದೇ ನೆನೆಪಿಸಿ ಕೊಳ್ಳುತ್ತಾ, ಇಂಥ ಮಹಾತ್ಮರ ಸ್ಮರಣೆಯಿಂದ, ನಮಗೆ ’ನಮ್ಮ ಮುಂದಿನ ಜನರ ಹಿತಕ್ಕಾಗಿ ದುಡುಯುವ, ಅವಕಾಶ ಭಾಗ್ಯಗಳು ಪದೇ ಪದೇ ಬರಲಿ.’ ಎಂದು ಹಾರೈಸುತ್ತಾ, ನನ್ನ ಮಾತಿಗೆ ಮಂಗಳ ಹೇಳುತ್ತೇನೆ.

ಅಕ್ಕಿಯೊಳಗನ್ನವನು ಮೊದಲಾರು ಕಂಡವರು | ಅಕ್ಕರದ ಬರಹಕ್ಕೆ ಮೊದಲಿಗದನಾರು || ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ | ದಕ್ಕುವುದೇ ಜಸ ನಿನಗೆ -ಮಂಕುತಿಮ್ಮ ||


Saturday, August 08, 2015

|| ಅಥ ಗಾಯತ್ರೀಜಪವಿಧಾನಮ್ ||

˜

ಅಥ ಯಜಮಾನಃ ಆಚಮ್ಯ, ಪ್ರಾಣಾನಾಯಮ್ಯ, ದೇಶಕಾಲೌ ಸಂಕೀರ್ತ್ಯ, ಮಮ ಮನಃ ಕಾಮನಾ ಸಿದ್ಧಯೇ, ಶ್ರೇಯೋಽಭಿವೃದ್ಧಯೇ, ಸವಿತೃದೇವತಾ ಪ್ರೀತಯೇ, ಅಮುಕಸಂಖ್ಯಾಕ ಗಾಯತ್ರೀಜಪಪೂರ್ತಯೇ ಚ ಅದ್ಯ ಅಮುಕಸಂಖ್ಯಾಕಗಾಯತ್ರೀಜಪಂ ಕರಿಷ್ಯೇ || ಇತಿ ಸಂಕಲ್ಪ್ಯ, ಭೂಶುದ್ಧ್ಯಾದಿಮಾತೃಕಾನ್ಯಾಸಾಂತೇ ಗಾಯತ್ರೀ ಶಾಪವಿಮೋಚನಂ ಕುರ್ಯಾತ್ |

೧) ಅಸ್ಯ ಶ್ರೀಬ್ರಹ್ಮಶಾಪವಿಮೋಚನಮಂತ್ರಸ್ಯ ಪ್ರಜಾಪತಿರೃಷಿಃ | ಗಾಯತ್ರೀ ಛಂದಃ | ಶ್ರೀಗಾಯತ್ರೀಶಕ್ತಿರ್ದೇವತಾ | ಬ್ರಹ್ಮಶಾಪವಿಮೋಚನಾರ್ಥೇ ಜಪೇ ವಿನಿಯೋಗಃ | ಇತಿ ಜಲಂ ತ್ಯಕ್ತ್ವಾ, “ಓಂ ಗಾಯ॒ತ್ರೀಂ ಬ್ರ॒ಹ್ಮೇತ್ಯು॑ಪಾಸೀ॒ತ | ಯದ್ರೂ॒ಪಂ ಬ್ರ॑ಹ್ಮವಿದೋ॒ ವಿದುಃ॑ | ತಾಂ ಪಶ್ಯಂ॑ತಿ॒ ಧೀರಾಃ॒ ಸುಮ॑ನಸಾ ವಾ॒ಚಮ॑ಗ್ರ॒ತಃ || ಓಂ ವೇ॒ದಾಂ॒ತ॒ನಾ॒ಥಾಯ॑ ವಿ॒ದ್ಮಹೇ॑ ಹಿರಣ್ಯಗ॒ರ್ಭಾಯ॑ ಧೀಮಹಿ | ತನ್ನೋ॑ ಬ್ರಹ್ಮಪ್ರಚೋ॒ದಯಾ॑ತ್” | ಇತಿ ಮಂತ್ರಂ ಜಪ್ತ್ವಾ,

’ದೇವಿ ಗಾಯತ್ರಿ ತ್ವಂ ಬ್ರಹ್ಮಶಾಪವಿಮುಕ್ತಾ ಭವ’ ಇತ್ಯುಕ್ತ್ವಾ, ಪುನರ್ಹಸ್ತೇ ಜಲಂ ಗೃಹೀತ್ವಾ,

೨) ಅಸ್ಯ ಶ್ರೀವಿಶ್ವಾಮಿತ್ರಶಾಪವಿಮೋಚನಮಂತ್ರಸ್ಯ ವಿಶ್ವಾಮಿತ್ರ ಋಷಿಃ | ಗಾಯತ್ರೀ ಛಂದಃ | ಶ್ರೀಗಾಯತ್ರೀಶಕ್ತಿರ್ದೇವತಾ | ವಿಶ್ವಾಮಿತ್ರಶಾಪವಿಮೋಚನಾರ್ಥೇ ಜಪೇ ವಿನಿಯೋಗಃ | ಇತಿ ಜಲಂ ತ್ಯಕ್ತ್ವಾ, “ಓಂ ಗಾಯ॒ತ್ರೀಂ ಭ॑ಜಾಮ್ಯ॒ಗ್ನಿಮು॑ಖೀಂ ವಿ॒ಶ್ವಗ॑ರ್ಭಾಂ॒ ಯದು॑ದ್ಭವಾ ದೇ॒ವಾಶ್ಚ॑ಕ್ರಿರೇ ವಿಶ್ವ॒ಸೃಷ್ಟಿ॑ಮ್ | ತಾಂ ಕಲ್ಯಾ॒ಣೀಮಿ॑ಷ್ಟ॒ಕರೀಂ॑ ಪ್ರಪ॒ದ್ಯೇ | ಯನ್ಮು॒ಖಾ ನ್ನಿ॑ಸ್ಸೃತೋ॒ಽಖಿಲ॒ವೇದ॒ಗರ್ಭಃ॑” || ಇತಿ ಜಪಿತ್ವಾ,

’ದೇವಿ ಗಾಯತ್ರಿ ತ್ವಂ ವಿಶ್ವಾಮಿತ್ರಶಾಪ ವಿಮುಕ್ತಾ ಭವ’ ಇತ್ಯುಕ್ತ್ವಾ, ಪುನರ್ಹಸ್ತೇ ಜಲಂ ಗೃಹೀತ್ವಾ,

೩) ಅಸ್ಯ ಶ್ರೀವಸಿಷ್ಠಶಾಪವಿಮೋಚನಮಂತ್ರಸ್ಯ ವಸಿಷ್ಠ ಋಷಿಃ | ಗಾಯತ್ರೀ ಛಂದಃ | ಶ್ರೀಗಾಯತ್ರೀಶಕ್ತಿರ್ದೇವತಾ | ವಸಿಷ್ಠಶಾಪವಿಮೋಚನಾರ್ಥೇ ಜಪೇ ವಿನಿಯೋಗಃ | ಇತಿ ಜಲಂ ತ್ಯಕ್ತ್ವಾ, “ಓಂ ಸೋಽಹಮರ್ಕಮ॑ಯಂ ಜ್ಯೋ॒ತಿರಾ॒ತ್ಮಜ್ಯೋ॑ತಿರ॒ಹಂ ಶಿ॑ವಃ | ಆತ್ಮಜ್ಯೋತಿರ॑ಹಂ ಶು॒ಕ್ರಃ ಸ॒ರ್ವಜ್ಯೋ॑ತೀರ॒ಸೋಽಸ್ಮ್ಯ॑ಹಮ್” || ಇತಿ ಜಪಿತ್ವಾ, ಯೋನಿಮುದ್ರಾಂ ಪ್ರದರ್ಶ್ಯ, ಗಾಯತ್ರೀಮಂತ್ರಂ ಪಠಿತ್ವಾ, ’ದೇವಿ ಗಾಯತ್ರಿ ತ್ವಂ ವಸಿಷ್ಠಶಾಪವಿಮುಕ್ತಾ ಭವ’ | ಏವಂ ಶಾಪವಿಮೋಚನಂ ಕೃತ್ವಾ, ಚತುರ್ವಿಂಶತಿಮುದ್ರಾಃ ಪ್ರದರ್ಶಯೇತ್[1] ||

ಅಥ ಋಷ್ಯಾದಿನ್ಯಾಸಾಃ ||

ಓಂ ವಿಶ್ವಾಮಿತ್ರರ್ಷಯೇ ನಮಃ, ಇತಿ ಶಿರಸಿ | ಗಾಯತ್ರೀಚ್ಛಂದಸೇ ನಮಃ, ಇತಿ ಮುಖೇ | ಸವಿತೃದೇವತಾಯೈ ನಮಃ, ಇತಿ ಹೃದಯೇ | ಜಪೇ ವಿನಿಯೋಗಾಯ ನಮಃ, ಇತಿ ಸರ್ವಾಂಗೇ ||

ಓಂ ತತ್ಸವಿತುರ್ಬ್ರಹ್ಮಾತ್ಮನೇ | ಅಂಗುಷ್ಠಾಭ್ಯಾಂ ನಮಃ | ಓಂ ವರೇಣ್ಯಂ ವಿಷ್ಣವಾತ್ಮನೇ | ತರ್ಜನೀಭ್ಯಾಂ ನಮಃ | ಓಂ ಭರ್ಗೋ ದೇವಸ್ಯ ರುದ್ರಾತ್ಮನೇ | ಮಧ್ಯಮಾಭ್ಯಾಂ ನಮಃ | ಓಂ ಧೀಮಹಿ ಈಶ್ವರಾತ್ಮನೇ | ಅನಾಮಿಕಾಭ್ಯಾಂ ನಮಃ | ಓಂ ಧಿಯೋ ಯೋ ನಃ ಸದಾಶಿವಾತ್ಮನೇ | ಕನಿಷ್ಠಿಕಾಭ್ಯಾಂ ನಮಃ | ಓಂ ಪ್ರಚೋದಯಾತ್ಸರ್ವಾತ್ಮನೇ [2] | ಕರತಲಕರಪೃಷ್ಠಾಭ್ಯಾಂ ನಮಃ ||

ಓಂ ತತ್ಸವಿತುರ್ಬ್ರಹ್ಮಾತ್ಮನೇ | ಹೃದಯಾಯ ನಮಃ | ಓಂ ವರೇಣ್ಯಂ ವಿಷ್ಣವಾತ್ಮನೇ | ಶಿರಸೇ ಸ್ವಾಹಾ | ಓಂ ಭರ್ಗೋ ದೇವಸ್ಯ ರುದ್ರಾತ್ಮನೇ | ಶಿಖಾಯೈ ವಷಟ್ | ಓಂ ಧೀಮಹಿ ಈಶ್ವರಾತ್ಮನೇ | ಕವಚಾಯ ಹುಮ್ | ಓಂ ಧಿಯೋ ಯೋ ನಃ ಸದಾಶಿವಾತ್ಮನೇ | ನೇತ್ರತ್ರಯಾಯ ವೌಷಟ್ | ಓಂ ಪ್ರಚೋದಯಾತ್ಸರ್ವಾತ್ಮನೇ | ಅಸ್ತ್ರಾಯ ಫಟ್ || [3]ಇತಿ

ಅಥ ಧ್ಯಾನಮ್ || ಮಂದಾರಾಹ್ವಯರೋಚನಾಂಜನಜಪಾರ್ಕಾಭೈರ್ಮುಖೈರಿಂದುಮದ್ರತ್ನೋ ದ್ಯನ್ಮುಕುಟಾಂಶುಸಂತತಚತುರ್ವಿಂಶಾರ್ಣಚಿತ್ರಾತನೂಃ | ಅಂಭೋಜೇರಿದರಾಹ್ವಯೌ ಗುಣಕಪಾಲಾಖ್ಯೌ ಚ ಪಾಶಾಂಕುಶೇಷ್ಟಾಭೀತೀರ್ದಧತೀ ಭವೇದ್ಭವಭಯಪ್ರೋತ್ಸಾರಿಣೀ ತಾರಿಣೀ ||[4] ಇತಿ, ಮಾನಸೋಪಚಾರೈರಭ್ಯರ್ಚ್ಯ[5],

ಓಂ ಆಯಾ॑ತು॒ ವರ॑ದಾ ದೇ॒ವಿ॒ ಅ॒ಕ್ಷರಂ॑ ಬ್ರಹ್ಮ॒ ಸಂಮಿ॑ತಮ್ |

ಗಾ॒ಯ॒ತ್ರೀಂ॑ ಛಂದ॑ಸಾಂ ಮಾ॒ತೇದಂ ಬ್ರ॑ಹ್ಮ ಜು॒ಷಸ್ವ॑ ಮೇ || ಇತ್ಯುಕ್ತ್ವಾ, ರುದ್ರಾಕ್ಷಮಾಲಾಂ ಮೂಲಮಂತ್ರೇಣ ಸಂಪ್ರೋಕ್ಷ್ಯ,

ಓಂ ಮಾಂ ಮಾಲೇ ಮಹಾಮಾಯೇ ಸರ್ವಶಕ್ತಿಸ್ವರೂಪಿಣಿ |

ಚತುರ್ವರ್ಗಸ್ತ್ವಯಿನ್ಯಸ್ತಸ್ತಸ್ಮಾನ್ಮೇ ಸಿದ್ಧಿದಾ ಭವ || ಇತಿ ಸಂಪ್ರಾರ್ಥ್ಯ, ಓಂ ಹ್ರೀಂ ಸಿದ್ಧ್ಯೈ ನಮಃ | ಇತಿ ಮಾಲಾಂ ಸಂಪೂಜ್ಯ, ಗಾಯತ್ರೀಮಂತ್ರಂ ಜಪೇತ್ ||

ಯಥಾ - “ಓಂ ಭೂರ್ಭುವಸ್ಸುವಃ ತತ್ಸ॑ವಿ॒ತುರ್ವರೇ॑ಣ್ಯಂ॒ ಭರ್ಗೋ॑ ದೇ॒ವಸ್ಯ॑ ಧೀಮಹಿ | ಧಿಯೋ॒ ಯೋ ನಃ॑ ಪ್ರಚೋ॒ದಯಾ॑ತ್” || ಇತಿ || ತತೋ ಜಪಾಂತೇ ಮಾಲಾಂ ಶಿರಸಿ ಧೃತ್ವಾ, ಪುನರ್ಯಥಾಸ್ಥಾನಂ ಸಂಸ್ಥಾಪ್ಯ, ಗಾಯತ್ರೀಮಂತ್ರನ್ಯಾಸಾನ್ ಕೃತ್ವಾ, ಧ್ಯಾತ್ವಾ, ಪುನರ್ಮಾನಸೋಪಚಾರೈರಭ್ಯರ್ಚ್ಯ, ಅಷ್ಟೌ ಮುದ್ರಾಃ ಪ್ರದರ್ಶಯೇತ್ |[6]

ಓಂ ಉ॒ತ್ತಮೇ॑ ಶಿಖ॑ರೇ ಜಾ॒ತೇ॒ ಭೂ॒ಮ್ಯಾಂ ಪ॑ರ್ವತ॒ಮೂರ್ಧ॑ನಿ |

ಬ್ರಾ॒ಹ್ಮಣೇ॑ಭ್ಯೋಽಭ್ಯ॑ನುಜ್ಞಾ॒ತಾ॒ ಗ॒ಚ್ಚ ದೇ॑ವಿ ಯ॒ಥಾ ಸು॑ಖಮ್ || ಇತ್ಯುಕ್ತ್ವಾ, ಹಸ್ತೇ ಜಲಮಾದಾಯ, ಮಯಾ ಕೃತೇನ ಜಪಕರ್ಮಣಾ ಭಗವತೀ ಗಾಯತ್ರೀ ದೇವೀ ಪ್ರೀಯತಾಮಿತ್ಯುಕ್ತ್ವಾ, “ಓಂ ಗುಹ್ಯಾತಿಗುಹ್ಯಗೋಪ್ತ್ರೀ ತ್ವಂ ಗೃಹಾಣಾಸ್ಮತ್ಕೃತಂ ಜಪಮ್ | ಸಿದ್ಧಿರ್ಭವತು ಮೇ ದೇವಿ ತ್ವತ್ಪ್ರಸಾದಾನ್ಮಹೇಶ್ವರಿ” || ಇತಿ ದೇವ್ಯೈ ನಿವೇದ್ಯ, ಪ್ರಾರ್ಥಯೇತ್ | “ಹೀನೋ ವಿಭಕ್ತಿವರ್ಣೈಶ್ಚ ವ್ಯಂಜನೈಶ್ಚ ಸ್ವರೈರಪಿ |

ಜಪೋ ಮೇ ಕ್ಷಮ್ಯತಾಂ ದೇವಿ ಪ್ರಸಾದಂ ಕುರು ಕಿಂಕರೇ” || ಇತಿ, ಅಥಾಸನಮಪಸಾರ್ಯ, ಶಾಂತಿರಸ್ತ್ವಿತಿ ಭೂಮೌ ಜಲಂ ಸಿಕ್ತ್ವಾ, ತಜ್ಜಲಂ ಶಿರಸಿ ಧಾರಯೇತ್ ||

ಇತಿ ಗಾಯತ್ರೀ ಜಪವಿಧಾನಮ್ ||