Monday, December 17, 2018

|| ಸ್ವಾಗತ - ಸಂಸ್ಕೃತಮ್ ||



|| ಸ್ವಾಗತ - ಸಂಸ್ಕೃತಮ್ ||

ಸ್ವಾಗತಂ ವೋ ಮಹಾಭಾಗಾಃ ಸ್ವಾಗತಂ ವೋ ಮಹಾಬುಧಾಃ |
ತುಷ್ಯಾಮೋ ದರ್ಶನಾತ್ಸದ್ಯೋ ಯುಷ್ಮಾಕಮಮರೋಪಮಾಃ || ೦೧ ||


ಯಥಾಮೃತಸ್ಯ ಸಂಪ್ರಾಪ್ತಿರ್ಯಥಾ ವರ್ಷಮನೂದಕೇ |
ಯಥಾ ಸದೃಶದಾರೇಷು ಪುತ್ರಜನ್ಮಾಪ್ರಜಸ್ಯ ಚ || ೦೨ || 


ಪ್ರನಷ್ಟಸ್ಯ ಯಥಾ ಲಾಭೋ ಯಥಾ ಹರ್ಷೋ ಮಹೋದಯೇ |
ತಥೈವಾಗಮನಂ ಮನ್ಯೇ ಸ್ವಾಗತಂ ವಸ್ಸುಬಾಂಧವಾಃ || ೦೩ ||


ಸ್ವಾಗತಂ ಭವತೇ ವಿಷ್ಣೋ ಲಕ್ಷ್ಮ್ಯಾ ಪ್ರಾಪ್ತೋಸಿ ಮೇ ಗೃಹಮ್ |
ಅಸ್ತಂ ಚ ಸವಿತಾ ಯಾತಃ ಸಂಧ್ಯೇಯಂ ಸಮುಪಸ್ಥಿತಾ || ೦೪ ||


ಲಕ್ಷ್ಮೀನಾರಾಯಣಾವತ್ರ ತ್ವಾಗತೌ ಭದ್ರಮಸ್ತು ವಃ |
ಅಪಿ ಸ್ವಜ್ಞಾತಿ ಬಂಧೂನಾಂ ಅನಮೀವಮನಾಮಯಮ್ || ೦೫ ||


ಸರ್ವೇಪಿ ಸುಖಿನಃ ಸಂತು ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು ನ ಕಶ್ಚಿದ್ದುಃಖಮಾಪ್ನುಯಾತ್ || ೦೬ ||

ಸಂಪಾದಕಃ
ಪರಮೇಶ್ವರ ಪುಟ್ಟನಮನೆ

Saturday, March 17, 2018

ಕಥನ


ಒಂದು ದಿನ ಮನೆಯ ಮುಂದಿರುವ ಹಣತೆಯಲ್ಲಿ ಚಿಕ್ಕ ಜಗಳ ಪ್ರಾರಂಭವಾಯಿತು.
ಹಣತೆ ನನ್ನಿಂದ ದೀಪ ಉರಿಯುತ್ತಿದೆ! ಆ ಬೆಳಕು ನನ್ನದು ಎಂದು ಹೇಳಿತು. ಇದನ್ನು ಕೇಳಿದ ಹಣತೆಯಲ್ಲಿದ್ದ ಎಣ್ಣೆ ನಾನು ಆ ದೀಪಕ್ಕೆ ಜೀವಾಳ. ನಾನೇ ಇರದಿದ್ದರೆ ದೀಪವೂ ಇಲ್ಲ, ಬೆಳಕೂ ಇಲ್ಲ! ಅದಕ್ಕಾಗಿ ಆ ಬೆಳಕು ನನಗೆ ಸೇರಿದ್ದು...ಎಂದಿತು. ಅಲ್ಲಿಯೇ ಇದ್ದ ಬತ್ತಿ ” Hello! ನಾನು ಉರಿಯುತ್ತಿರುವದಿಂದಲೇ ದೀಪ ಉರಿಯುತ್ತಿದೆ. Logically ಬೆಳಕು ನನ್ನದು ಎಂದಿತು. ಈ ಕಚ್ಚಾಟವನ್ನು ನೋಡುತಿದ್ದ ಗಾಳಿ ನಾನು ಇಲ್ಲದೇ ದೀಪವು ಉರಿಯುವುದಿಲ್ಲ! ಒಂದು ವೇಳೆ ನಾನು ಜೋರಾಗಿ ಬಂದರೆ ದೀಪ ಆರಿಹೋಗುತ್ತದೆ. ಆದ್ದರಿಂದ ಬೆಳಕು ನನ್ನ ನಿಯಂತ್ರಣದಲ್ಲಿದೆ ಎಂದು ವಾದಿಸಿತು. ಈ ವಾದ ವಿವಾದಗಳ ಭರಾಟೆಯಲ್ಲಿ ಹಣತೆ ಒಡೆದು ಹೋಯಿತು.
ಎಣ್ಣೆ ಹರಿದು ಹೋಯಿತು.
ಬತ್ತಿ ಒಂಟಿಯಾಗಿ ಸೊರಗಿ ಹೋಯಿತು.
ಗಾಳಿ ಜೋರಾಗಿ ಬೀಸಿ, ಉರಿಯುತ್ತಿದ್ದ ದೀಪ ಆರಿಹೋಯಿತು !
ಎಲ್ಲವೂ ಒಟ್ಟಾಗಿ ಇರುತ್ತಿದ್ದರೆ, ಆ ಭರವಸೆಯ ಬೆಳಕು ಮನೆಯಲ್ಲೆಲ್ಲಾ ಪಸರಿಸಿರುತ್ತಿತ್ತು. ಅಹಮಿಕೆಯಿಂದ ಅಂಧಕಾರ ಮನೆಯನ್ನು ಹೊಕ್ಕಿತು...


ಇಂಥ ಒಂದು ಕಥೆ ಮನುಷ್ಯನ ಕಣ್ಣನ್ನು ಅದೆಷ್ಟು ಬಾರಿ ತೆರಿಸಿದೆಯೋ??? ಅದಕ್ಕೆ ನಾವು ಚಿರ ಋಣಿಗಳು... ಇಂಥ ಕಥೆಗಳನ್ನು ಹೇಳುವ ಮತ್ತು ಕೇಳುವ ಪರಿಪಾಠ... ಬಾಲ್ಯದಿಂದಲೂ ನಮ್ಮ ಜೊತೆ ಬಂದಿದೆ. ಮೌಖಿಕವಾಗಿ ಕಥೆಗಳನ್ನು ಹಂಚಿಕೊಳ್ಳುವ ವಿಧಾನ ಅತ್ಯಂತ ಹಳೆಯದ್ದಾಗಿದ್ದು,  ಹೆಚ್ಚಾಗಿ ಜನರ ಒಳ್ಳೆಯ ವರ್ತನೆಗೆ ಮತ್ತು ಮೌಲ್ಯಯುತ ಬದುಕಿಗೆ ಈ ಕಥೆಗಳು ತುಂಬಾ ಸಹಕಾರಿಗಳಾಗಿವೆ.

ಕಥೆ ಎಂದರೆ ಬರಹದ ಅಥವಾ ಮಾತಿನ ಮೂಲಕವಾಗಿ, ತಾನು ಕಂಡ ಅಥವಾ ಕೇಳಿದ ವಿಷಯವನ್ನು ಚಿತ್ರಿಸುವುದು. ಕನ್ನಡದಲ್ಲಿ ಪ್ರಾಚೀನ ಕಾಲದಿಂದಲೂ ಕತೆಗಳು ಜನಪ್ರಿಯವಾಗಿವೆ. ವಡ್ಡಾರಾಧನೆ, ಪಂಚತಂತ್ರಕಥೆಗಳು, ಬೃಹತ್ಕಥೆ, ಕಥಾಸರಿತ್ಸಾಗರ, ನೀತಿಕಥೆಗಳು, ಪುರಾಣಕಥೆಗಳು, ಉಪನಿಷತ್ಕಥೆಗಳು ಹೀಗೆ ಕಥೆಗಳ ಸಾಲುಗಳನ್ನೇ ಕಾಣುತ್ತೇವೆ. ಪ್ರತಿನಿತ್ಯ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ ಮತ್ತು ವಿಶೇಷ ಸಂಚಿಕೆಗಳಲ್ಲಿ ಹೊಸ ಹೊಸ ಕಥೆಗಳು ಪ್ರಕಟವಾಗುತ್ತಲೇ ಇರುತ್ತವೆ. ಒಂದು ಚಿಕ್ಕ ಘಟನೆ ಅಥವಾ ವಿಷಯವನ್ನು ವಿಸ್ತರಿಸಿ, ಸ್ವಾರಸ್ಯವಾಗಿ ನಿರೂಪಿಸುವ, ಈ ಸಾಹಿತ್ಯ ಪ್ರಕಾರವನ್ನು ಇಷ್ಟ ಪಡದವರಿಲ್ಲ! ಕಥಾ ಸಾಹಿತ್ಯವನ್ನು ಚುಟುಕು(ತುಣುಕು) ಕಥೆಗಳು, ಸಣ್ಣ ಕಥೆಗಳು ಮತ್ತು ನೀಳ್ಗಥೆಗಳು ಎಂದು ವಿಭಾಗಿಸಬಹುದು. ಈ ಎಲ್ಲ ಚೌಕಟ್ಟನ್ನೂ ದಾಟಿದ ಭಾಗವೇ ಕಾದಂಬರಿಯೆನಿಸುತ್ತದೆ. ಅದೂ ಕೂಡ ಸಾಹಿತ್ಯ ಪ್ರಕಾರಗಳಲ್ಲಿ  ಜನಪ್ರಿಯವಾಗಿದೆ. ಪ್ರಕೃತ ಕಾದಂಬರಿಯ ತರುವಾಯ ಸಣ್ಣ ಕಥೆಯೇ ಅತ್ಯಂತ ಜನಪ್ರಿಯವಾದ ಸಾಹಿತ್ಯಪ್ರಕಾರ ಎನ್ನಬಹುದು.

ಪುರಾಣದಲ್ಲಿ ಒಂದು ಕಥೆಯು ಹೀಗಿದೆ.  ವಿಷ್ಣು ಮಲಗಿರುವಾಗ ಅವನ ಕಿವಿ­­ಯಿಂದ ಎರಡು ರಾಕ್ಷಸರು ಹೊರಬಂದರು! ಅವರಲ್ಲಿ ಒಬ್ಬನ ಹೆಸರು ಮಧು ಎಂದರೆ ರಾಗ ಅಥವಾ ಬಯಕೆ. ಮತ್ತೊಬ್ಬನ ಹೆಸರು ಕೈಟಭ ಎಂದರೆ ದ್ವೇಷ ಅಥವಾ ಕ್ರೋಧ. ವಿಷ್ಣು ಮಲಗಿದ್ದ! ಎಂಬಲ್ಲಿಗೆ ಹೇಳುವುದೇನಿದೆ? ಕೇಳುವುದಾದರೂ ಏನನ್ನು? ಹೀಗೆ ಬುದ್ಧಿ ಮಂಕಾದಾಗ (ಹೇಳಿ-ಕೇಳಿ ಮಾಡಲೂ ಆಗದಿದ್ದಾಗ) ಅಂದರೆ ಸ್ವತಃ ಯಜಮಾನ ಮೈಮರೆತಾಗ ಕಾಮ-ಕ್ರೋಧಗಳು ಹುಟ್ಟುವವು! ಅವು ಎಲ್ಲೆಂದರಲ್ಲಿ ಹುಟ್ಟಿಕೊಳ್ಳಬಹುದು. ಕಥೆ ಕೇಳದ ಕಿವಿಯಿದ್ದರೆ ಅವರಿಗೆ ತುಂಬಾ ಅನುಕೂಲ. ಅದೇ ಅವರಿಗೆ ಹುಟ್ಟು. ಅವ­ರೊಡನೆ ವಿಷ್ಣು ಸಾವಿರ ವರ್ಷಗಳವರೆಗೆ ಯುದ್ಧ ಮಾಡಿದ. ಆದರೂ ಅವರನ್ನು ಗೆಲ್ಲಲು ವಿಷ್ಣುವಿಗೂ ಆಗಲಿಲ್ಲ! ನಂತರ ವಿಷ್ಣು ನೀರಿನೊಳಗೆ ಹೊಕ್ಕ. ಇಲ್ಲಿ ನೀರು ಸ್ನೇಹದ ಪ್ರತೀಕ. ಆಗ ವಿಷ್ಣುವಿಗೆ ಈ ರಾಕ್ಷಸರನ್ನು ಸೋಲಿಸಲು ಸಾಧ್ಯವಾಯಿತು! ಅಂದರೆ ಸ್ನೇಹದಿಂದ ಮಾತ್ರ ಕಾಮವನ್ನು ಪ್ರೇಮ­ವಾಗಿಸಬಹುದು ಮತ್ತು ಕ್ರೋಧವನ್ನು ಕರ್ಮವಾಗಿಸಬಹುದು. ಹಾಗಾಗಿ “ಕಾಮ ಮತ್ತು ಕ್ರೋಧವನ್ನು ಗೆಲ್ಲುವುದು ದುಸ್ಸಾಧ್ಯ. ಅವುಗಳನ್ನು ರೂಪಾಂತರಿಸಿ ಕೊಂಡು ಅವುಗಳನ್ನು ಆಳುವುದು (ಒಲಿಸಿ ಕೊಳ್ಳುವುದು) ಸಾಧ್ಯ” ಎಂಬುದು ಈ ಪುಟ್ಟ ಕಥೆಯ ಮರ್ಮ. ಹೀಗೆ ಎಷ್ಟೋ ಕಥೆಗಳು ಸಾಂಕೇತಿಕವಾಗಿರುತ್ತವೆ. ಈ ಸಂಕೇತಗಳನ್ನು ಅರ್ಥೈಸಿ ಕೊಂಡರೆ, ಆ ಕಥೆಗಳು ನಮ್ಮ ಪಾಲಿಗೆ ವರವಾಗಿ ಪರಿಣಮಿಸುತ್ತವೆ.